ವ್ಯಕ್ತಿಯ ತಲೆಗೆ ದೊಣ್ಣೆಯಿಂದ ಹೊಡೆದು ಮೊಬೈಲ್, ಹಣ ಕಳವು: 8 ಆರೋಪಿಗಳು ಅರೆಸ್ಟ್ - Mahanayaka
9:55 AM Friday 20 - September 2024

ವ್ಯಕ್ತಿಯ ತಲೆಗೆ ದೊಣ್ಣೆಯಿಂದ ಹೊಡೆದು ಮೊಬೈಲ್, ಹಣ ಕಳವು: 8 ಆರೋಪಿಗಳು ಅರೆಸ್ಟ್

police
29/11/2023

ಬೆಂಗಳೂರು:  ಆರ್.ಎಂ.ಸಿ. ಯಾರ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಮೊಬೈಲ್ ಫೋನ್ ಮತ್ತು ಹಣವನ್ನು ದರೋಡೆ ಮಾಡಿದ್ದ 8 ಜನರನ್ನು ಬಂಧಿಸಿದ್ದಾರೆ.
ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 13 ರ ಬೆಳಗಿನ ಜಾವ 3-00 ಗಂಟೆ ಸಮಯದಲ್ಲಿ ಮನೆಗೆ ವಾಪಸು ಹೋಗಲು ನಡೆದುಕೊಂಡು ತುಮಕೂರು ರಸ್ತೆಯ ಎ.ಪಿ.ಎಂ.ಸಿ. ಯಾರ್ಡ್ 1ನೇ ಗೇಟ್ ರಸ್ತೆಯ ಕಾಶಿವಿಶ್ವನಾಥ ದೇವಸ್ಥಾನದ ಮುಂಭಾಗದಲ್ಲಿ ಕ್ಯಾಬ್ ಗೆ ಕಾಯುತ್ತಿರುವಾಗ ಕೆ.ಟಿ.ಎಂ.ಬೈಕ್ ಮತ್ತು ಗೂಡ್ಸ್ ವಾಹನದಲ್ಲಿ ಸುಮಾರು 9–10 ಜನ ಅಪರಿಚಿತ ವ್ಯಕ್ತಿಗಳು ದೂರುದಾರರಿಗೆ ಮರದ ದೊಣ್ಣೆಯಿಂದ ಬೆದರಿಸಿ 2 ಮೊಬೈಲ್ ಫೋನ್ ಹಾಗೂ 5.200 ರೂ. ನಗದು ಹಣವನ್ನು ಕಿತ್ತುಕೊಂಡು, ತಲೆಗೆ ಮರದ ದೊಣ್ಣೆಯಿಂದ ಹೊಡೆದು ರಕ್ತ ಗಾಯ ಪಡಿಸಿ ಹೋಗಿರುತ್ತಾರೆ.

ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಸಂಬಂಧ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ತನಖೆ ಕೈಗೊಂಡ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದ 5 ಜನ ಆರೋಪಿತ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ 3 ಜನ ಆರೋಪಿತ ವ್ಯಕ್ತಿಗಳನ್ನು ನ.22ಕ್ಕೆ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 8 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರುಗಳಿಂದ 1-ಮೊಬೈಲ್ ಫೋನ್ ಮತ್ತು + 5,200/- ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನ ಮತ್ತು 7 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ನವೆಂಬರ್ 22 ರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ಈ ಪ್ರಕರಣದಲ್ಲಿ ಹೆಚ್ಚುವರಿಯಾಗಿ ದರೋಡೆ ಪ್ರಕರಣದೊಂದಿಗೆ, ಕೊಲೆ ಪ್ರಕರಣ ಕಲಂಗಳನ್ನು ಅಳವಡಿಸಿಕೊಂಡು ತನಿಖೆ ಮುಂದುವರೆಸಿದ್ದು, ಈ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.


Provided by

ಈ ಪ್ರಕರಣದ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಉಪ ಪೊಲೀಸ್ ಆಯುಕ್ತ ಸೈದುಲು ಆಡಾವತ್ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಸದಾನಂದ ಎ ತಿಪ್ಪಣ್ಣವರ್, ಸಹಾಯಕ ಪೊಲೀಸ್ ಆಯುಕ್ತರು ಪೀಣ್ಯ ಉಪ ವಿಭಾಗ ರವರ ನೇತೃತ್ವದಲ್ಲಿ, ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ ಸುರೇಶ್ ಪಿ. ಮತ್ತು ಸಿಬ್ಬಂದಿಯವರುಗಳು ಆರೋಪಿತ ವ್ಯಕ್ತಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಇತ್ತೀಚಿನ ಸುದ್ದಿ