ಮಾವನ ಮನೆಯಿಂದ ಬರುತ್ತಿದ್ದ ವ್ಯಕ್ತಿ ಅಪಘಾತಕ್ಕೆ ಬಲಿ: ಪತ್ನಿ, ಮಗು ಪಾರು - Mahanayaka
1:09 PM Thursday 12 - December 2024

ಮಾವನ ಮನೆಯಿಂದ ಬರುತ್ತಿದ್ದ ವ್ಯಕ್ತಿ ಅಪಘಾತಕ್ಕೆ ಬಲಿ: ಪತ್ನಿ, ಮಗು ಪಾರು

chamaraja nagara
30/10/2023

ಚಾಮರಾಜನಗರ: ಮಾವನ ಮನೆಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆ ತಮ್ಮಡಹಳ್ಳಿ ಬಳಿ ನಡೆದಿದೆ.
ಬೈಕ್ ಸವಾರ ಹೊನ್ನಹಳ್ಳಿಹುಂಡಿ ಗ್ರಾಮದ ದೊಡ್ಡಶೆಟ್ಟಿ (58) ಸಾವನ್ನಪ್ಪಿದವರಾಗಿದ್ದಾರೆ.

ಮಾವನ ಮನೆಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಪಿಕಪ್ ವೊಂದು ಡಿಕ್ಕಿಯಾಗಿದ್ದು, ಪರಿಣಾಮವಾಗಿ ಅವರ ತಲೆಗೆ ಗಂಭೀರವಾದ ಏಟು ತಗಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ವೇಳೆ ದೊಡ್ಡಶೆಟ್ಟಿ ಅವರ ಪತ್ನಿ ಹಾಗೂ ಮಗು ಕೂಡ ಬೈಕ್ ನಲ್ಲಿದ್ದರು. ಆದ್ರೆ ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ