ಮಾಲಿಕನ ಜೊತೆಗೆ ವಾಕಿಂಗ್ ಬಂದ ಹುಂಜ: ಎಲ್ಲರಿಗೂ ಅಚ್ಚರಿ!

11/04/2025
ಚಿತ್ರದುರ್ಗ: ಮುಂಜಾನೆ ಸಾಮಾನ್ಯವಾಗಿ ನಾಯಿಯನ್ನು ಕರೆದುಕೊಂಡು ವಾಕಿಂಗ್ ಗೆ ಹೋಗುವವರನ್ನು ನೀವು ನೋಡಿರಬಹುದು. ಆದ್ರೆ ಇಲ್ಲೊಬ್ಬರು ತಮ್ಮ ಪ್ರೀತಿ ಪಾತ್ರವಾದ ಹುಂಜವನ್ನು ವಾಕಿಂಗ್ ಗೆ ಕರೆದೊಯ್ದಿದ್ದು, ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಡಿ.ಸುಧಾಕರ್ ಕ್ರೀಡಾಂಗಣಕ್ಕೆ ಪ್ರತಿ ನಿತ್ಯ ನೂರಾರು ಜನರು ವಾಕಿಂಗ್ ಗೆ ಬರುತ್ತಿರುತ್ತಾರೆ. ಇದೇ ಕ್ರೀಡಾಂಗಣಕ್ಕೆ ನಗರದ ವ್ಯಾಪಾರಿ ಆಯೂಬ್ ಎಂಬವರು ತಮ್ಮ ಹುಂಜವನ್ನು ಕರೆದುಕೊಂಡು ವಾಕಿಂಗ್ ಗೆ ಬಂದಿದ್ದಾರೆ.
ಮಾಲಿಕ ಆಯೂಬ್ ಜೊತೆಗೆ ಹುಂಜ ವಾಕಿಂಗ್ ಮಾಡುತ್ತಾ, ಎಲ್ಲರ ಗಮನ ಸೆಳೆದಿದೆ. ಮಾಲಿಕನ ಜೊತೆಗೆ ವಾಕಿಂಗ್ ಮಾಡುತ್ತಿರುವ ಹುಂಜವನ್ನು ನೋಡಿ ಸಾರ್ವಜನಿಕರು ಅಚ್ಚರಿಗೀಡಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: