ಹಾಡಹಗಲೇ ಬೈಕ್ ನಲ್ಲಿದ್ದ ಹಣ ಎಗರಿಸಿದ ಐನಾತಿ ಕಳ್ಳ !

21/04/2025
ಹುಣಸಗಿ: ಹುಣಸಗಿ ನಗರದಲ್ಲಿ ಮಧ್ಯಾಹ್ನ 12:30 ರ ಸಮಯಕ್ಕೆ ಬೈಕ್ ನಲ್ಲಿದ್ದ ನಗದು ಹಣವನ್ನು ಏಗರಿಸಿ ಪರಾರಿಯಾದ ಘಟನೆ ನಡೆದಿದೆ.
ಮಲ್ಲೇಶ್ ತಂದೆ ಬಸಪ್ಪ ಯಾಳಗಿ ಎನ್ನುವ ಗುಂಡಲಗೇರಿ ಗ್ರಾಮದ ಯುವಕ ನಗರದ SBI ಬ್ಯಾಂಕ್ ನಿಂದ 1,35,000 ಹಣವನ್ನು ಡ್ರಾ ಮಾಡಿಕೊಂಡು ಬಂದಿದ್ದ ದೇವಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ರಾಯಲ್ ರೆಸ್ಟೋರೆಂಟ್ ನ ಮುಂದೆ ಬೈಕ್ ನಿಲ್ಲಿಸಿ ಪೆಟ್ರೋಲ್ ಗೆಂದು ಖಾಲಿ ಬಾಟಲಿ ತೆಗೆದುಕೊಂಡು ಬರಲು ಹೋಗಿದ್ದರು.
ಈ ವೇಳೆ ಕಾದು ಕುಳಿತಿದ್ದ ಗ್ಯಾಂಗ್ ಬೈಕ್ ನಲ್ಲಿದ್ದ 1, 30,000 ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ. ಹಣ ಕಳ್ಳತನದ ದೃಶ್ಯ ರೆಸ್ಟಾರೆಂಟ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: