ಸಫಾರಿಗೆ ಬಂದಿದ್ದ ಪ್ರವಾಸಿಗರ ಟ್ರಕ್ ನ್ನು ಎತ್ತಿ ಎಸೆಯಲು ಯತ್ನಿಸಿದ ಕಾಡಾನೆ: ವಿಡಿಯೋ ವೈರಲ್

ಸಫಾರಿಗೆ ಬಂದಿದ್ದ ಟ್ರಕ್ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ದಕ್ಷಿಣ ಆಫ್ರಿಕಾದ ಪಿಲಾನೆಸ್ ಬರ್ಗ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ಪ್ರವಾಸಕ್ಕೆ ಹೊರಟಿದ್ದ ವೇಳೆ ಟ್ರಕ್ ಚಾಲಕನಿಗೆ ಏಕಾಏಕಿ ಆನೆ ಎದುರಾಗಿದೆ. ಏಕಾಏಕಿ ಎದುರಾದ ಆನೆಯನ್ನು ಕಂಡು ಟ್ರಕ್ ಚಾಲಕ ಬೆಚ್ಚಿಬಿದ್ದಿದ್ದಾನೆ, ಟ್ರಕ್ ಮೇಲೆ ಅಟ್ಯಾಕ್ ಮಾಡಬೇಡ ಎಂದು ಆತ ಕೂಗಿ ಹೇಳಿದರೂ ಬಿಡದ ಆನೆ, ಟ್ರಕ್ ನ್ನು ತನ್ನ ದಂತದ ಮೂಲಕ ಎತ್ತಿ ಎರಡು ಬಾರಿ ನೆಲಕ್ಕೆ ಅಪ್ಪಳಿಸಿದೆ.
ಟ್ರಕ್ ನಲ್ಲಿದ್ದವರು ಭಯಭೀತರಾಗಿದ್ದಾರೆ. ಟ್ರಕ್ ನ್ನು ಬಿಟ್ಟು ಹೋಗು ಎಂದು ಚಾಲಕ ಬೊಬ್ಬೆ ಹಾಕಿದರೂ ಆನೆ ಕ್ಯಾರೇ ಮಾಡದೇ ಟ್ರಕ್ ನ್ನು ಎತ್ತಿ ಎಸೆಯಲು ಪ್ರಯತ್ನಿಸಿತ್ತು. ಕೊನೆಗೆ ಟ್ರಕ್ ನ್ನು ಬಿಟ್ಟು ಸ್ಥಳದಿಂದ ತೆರಳಿದೆ.
ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಅಪಾಯ ಸಂಭವಿಸಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
An elephant attacks a tourist truck in South Africa 🇿🇦 pic.twitter.com/BX8typkcUq
— Africa In Focus (@AfricaInFocus_) March 19, 2024
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth