ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ಮಹಿಳೆ ಸಾವಿಗೆ ಶರಣು!

ಬೆಂಗಳೂರು: ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹೆಬ್ಬಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿದ್ದಾರೆ.
ಬಾಹರ್ ಅಸ್ಮಾ(29) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. 2 ವರ್ಷಗಳ ಹಿಂದೆ ಬಶೀರ್ ಉಲ್ಲಾ ಜೊತೆಗೆ ಇವರ ವಿವಾಹವಾಗಿತ್ತು. ಆದ್ರೆ ಬಶೀರ್ ಉಲ್ಲಾಗೆ ಬೇರೆ ಯುವತಿಯ ಜೊತೆಗೆ ಸಂಬಂಧ ಇದೆ ಎಂದು ತಿಳಿದು ಬಾಹರ್ ಅಸ್ಮಾ ಸಾವಿಗೆ ಶರಣಾಗಿದ್ದಾರೆ.
ಮನೆಯ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಸ್ಮಾಳ ಮೃತದೇಹ ಪತ್ತೆಯಾಗಿತ್ತು. ಸದ್ಯ ಪತಿ ಬಶೀರ್ ಉಲ್ಲಾನನ್ನ ಹೆಬ್ಬಾಳ ನಗರ ಪೊಲೀಸರು ಬಂಧಿಸಿದ್ದಾರೆ. ಬಶೀರ್ ಉಲ್ಲಾ, ಜಬೀನ್ ತಾಜ್, ಹರ್ಷದ್ ಉಲ್ಲಾ, ಮಜರ್ ಖಾನ್, ತರ್ಬೇಜ್ ಖಾನ್, ಹರ್ಷಿಯಾ, ನೌಶದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: