ಕುಡಿಯುವ ನೀರಿಗಾಗಿ ಪ್ರಾಣದ ಹಂಗುತೊರೆದು ಬಾವಿಗಿಳಿದ ಮಹಿಳೆ!

ನಾಸಿಕ್: ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ನೀರಿನ ಬಿಕ್ಕಟ್ಟು ತೀವ್ರವಾಗಿ ಕಾಡುತ್ತಿದ್ದು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತಾಲೂಕು ಪೇಠ್‌ನಲ್ಲಿರುವ ಬೋರಿಚಿವರಿ ಗ್ರಾಮದಲ್ಲಿ ನೀರಿಗಾಗಿ ಮಹಿಳೆಯರು ಪರದಾಡುತ್ತಿದ್ದಾರೆ.
ಬಿಸಿಲಿನ ತಾಪವೊಂದೆಡೆಯಾದರೆ, ನೀರಿಗಾಗಿ ಅಲೆದಾಡುವ ದುಸ್ಥಿತಿ ಇನ್ನೊಂದೆಡೆಯಾಗಿದೆ. ಬಿಸಿಲಿನ ತಾಪದಲ್ಲಿ ಇಲ್ಲಿನ ಮಹಿಳೆಯರು ನೀರು ತರಲು ಕೊಡ ಹಿಡಿದು ಮೂರು ನಾಲ್ಕು ಕಿ.ಮೀ. ದೂರು ನಡೆದುಕೊಂಡು ಹೋಗುವಂತಾಗಿದೆ.
ಬೋರಿಚಿವರಿ ಗ್ರಾಮದ ಮಹಿಳೆಯೊಬ್ಬರು ನೀರು ತರಲು ಆಳವಾದ, ಕಿರಿದಾದ ಬಾವಿಗೆ ಇಳಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇಲ್ಲಿನ ನೀರಿನ ಸಮಸ್ಯೆಗೆ ಹಿಡಿದ ಕನ್ನಡಿಯಂತೆ ಈ ವಿಡಿಯೋ ಕಂಡು ಬಂದಿದೆ.
ಬೇಸಿಗೆಯಲ್ಲಿ ಬಾವಿಯ ತಳಕ್ಕೆ ನೀರು ಮುಟ್ಟಿದ್ದು, ಅಲ್ಲಿಂದ ನೀರು ಹಿಡಿದು ಮೇಲಕ್ಕೆ ತರುವುದು ಮಹಿಳೆಯರಿಗೆ ನಿತ್ಯ ಕಾಯಕವಾಗಿದೆ. ಅಲ್ಲದೇ ಬೇರೆಯವರಿಂದ ನೀರು ಪಡೆಯಬೇಕಾದರೆ, ಸ್ವಲ್ಪ ನೀರಿಗೆ ಬರೋಬ್ಬರಿ 60 ರೂಪಾಯಿಗಳನ್ನು ನೀಡಬೇಕಾಗುತ್ತದೆ ಅಂತ ಗ್ರಾಮದ ಉಪ ಸರಪಂಚರೊಬ್ಬರು ಹೇಳಿದ್ದಾರೆ.
ನೀರಿನ ಸಮಸ್ಯೆಯ ವಿರುದ್ಧ ಆಕ್ರೋಶಗೊಂಡಿರುವ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ಬಿಕ್ಕಟ್ಟು ಪರಿಹರಿಸುವಂತೆ ಒತ್ತಾಯಿಸಿದ್ದಾರೆ.
#WATCH | Maharashtra | Women face hardships in their quest to get water for daily use amid water crisis in Borichivari village of Taluka Peth in Nashik district pic.twitter.com/2TTSBTaVMd
— ANI (@ANI) April 20, 2025
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: