ಡಿಶ್ ರಿಪೇರಿ ಮಾಡುತ್ತಿದ್ಧ ವೇಳೆ ಮೂರನೇ ಮಹಡಿ ಮೇಲಿನಿಂದ ಆಯತಪ್ಪಿ ಬಿದ್ದ ಯುವಕ ಸಾವು
ಡಿಶ್ ರಿಪೇರಿ ಮಾಡುತ್ತಿದ್ಧ ವೇಳೆ ವಸತಿ ನಿಲಯದ ಮೂರನೇ ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೈಕಂಬ ಎಂಬಲ್ಲಿ ನಡೆದಿದೆ. ಯತೀಶ್, ಮೃತಪಟ್ಟ ದುರ್ದೈವಿ.
ಯತೀಶ್ ಅವರು ಕೈಕಂಬದಲ್ಲಿ ವಸತಿ ನಿಲಯದ ಮನೆಯೊಂದರ ಡಿಶ್ ರಿಪೇರಿ ಮಾಡುವ ವೇಳೆ ಆಯತಪ್ಪಿ ಮೇಲಿನಿಂದ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ವಸತಿ ನಿಲಯದ ಕೆಲ ಭಾಗದಲ್ಲಿರುವ ಬಾವಿಯ ಮೇಲೆ ಕಬ್ಬಿಣದ ರಕ್ಷಣಾ ಬೇಲಿಯ ಮೇಲೆ ಬಿದ್ದು ತಲೆಗೆ ಗಾಯವಾಗಿದ್ದು, ಸ್ಥಳದಲ್ಲಿ ಸಾಕಷ್ಟು ರಕ್ತ ಚೆಲ್ಲಿದೆ.
ಘಟನೆ ನಡೆದ ತಕ್ಷಣ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ತಲೆಗೆ ಗಂಭೀರವಾದ ಗಾಯವಾಗಿದ್ದರಿಂದ ಸಾವನ್ನಪ್ಪಿದ ಬಗ್ಗೆ ವೈದ್ಯರು ದೃಢಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw