ಚಿಕ್ಕಮಗಳೂರು: ಯುವಕನಿಗೆ ತಂಡದಿಂದ ಮಾರಣಾಂತಿಕ ಹಲ್ಲೆ: ಕತ್ತಿ ಬೀಸಿ ಮನಸೋ ಇಚ್ಛೆ ಥಳಿಸಿದ ದುಷ್ಕರ್ಮಿಗಳು
ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, 5ಕ್ಕೂ ಅಧಿಕ ದುಷ್ಕರ್ಮಿಗಳು ಮನಸೋ ಇಚ್ಛೆ ಥಳಿಸಿದ್ದಾರೆ.
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾನೆನ್ನಲಾದ ಅಜಿತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಹಮ್ಜಾ, ಉಬೇದ್, ಹಿದ್ದು, ರಶೀದ್, ಸುಹೇಬ್ ಎಂಬವರು ಹಲ್ಲೆ ನಡೆಸಿದವರು ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಲ್ಲೆಗೊಳಗಾಗಿರುವ ಯುವಕ ಅಜಿತ್, ಕೆಲವು ಮುಸ್ಲಿಮ್ ಯುವಕರು ನನ್ನ ಮೇಲೆ ಡೈರೆಕ್ಟ್ ಆಗಿ ಆಟಾಕ್ ಮಾಡಿದ್ರು, ಬಂದು ಹೊಡೆದು, ಕತ್ತಿ ಎಲ್ಲ ಬೀಸಿದ್ರು, ನನ್ನ ಎದೆಗೆ, ಕಣ್ಣಿಗೆ ಗಾಯವಾಗಿದೆ. ಅಷ್ಟೊತ್ತಲ್ಲಿ ಡ್ಯೂಟಿಯಲ್ಲಿದ್ದ ಪೊಲೀಸ್ ಬಂದು ನನ್ನನ್ನು ಬಿಡಿಸಿ ಕರ್ಕೊಂಡು ಹೋದ್ರು, ಅವರ ಮೇಲೆ ಕೂಡ ಹಲ್ಲೆ ನಡೆಸಲಾಗಿದೆ, ಪೊಲೀಸ್ ನವರು ಪೊಲೀಸ್ ಸ್ಟೇಷನ್ ಗೆ ನನ್ನನ್ನು ಕರೆದೊಯ್ದು ನಂತರ ಆಸ್ಪತ್ರೆಗೆ ದಾಖಲಿಸಿದ್ರು ಎಂದು ತಿಳಿಸಿದರು.
ವೈಯಕ್ತಿ ದ್ವೇಷಕ್ಕಾಗಿ ಅವರು ಈ ಕೃತ್ಯ ಮಾಡಿದ್ದಾರೆ. ಅವರಿಗೆ ಕೆಲವೊಂದು ವಿಷಯದ ಬಗ್ಗೆ ನನ್ನ ಮೇಲೆ ವೈಯಕ್ತಿ ದ್ವೇಷ ಇತ್ತು ಹೀಗಾಗಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw