ಸುದ್ದಿ ಮಾಡಲು ಹೋಗಿ ತಾನೇ ಸುದ್ದಿಯಾದ ಯೂಟ್ಯೂಬರ್ ! | ಆನೆ ದಾಳಿಯಿಂದ ಜಸ್ಟ್ ಮಿಸ್ - Mahanayaka

ಸುದ್ದಿ ಮಾಡಲು ಹೋಗಿ ತಾನೇ ಸುದ್ದಿಯಾದ ಯೂಟ್ಯೂಬರ್ ! | ಆನೆ ದಾಳಿಯಿಂದ ಜಸ್ಟ್ ಮಿಸ್

youtuber
14/01/2025

ಕೊಟ್ಟಿಗೆಹಾರ:  ಸುದ್ದಿ ಮಾಡಲು ಹೋಗಿ ಯೂಟ್ಯೂಬರ್ ಒಬ್ಬ ತಾನೇ ಸುದ್ದಿಯಾಗಿದ್ದಾರೆ. ಸುದ್ದಿ ಮಾಡಲು ತೆರಳಿದ್ದ ವೇಳೆ ಆನೆ ದಾಳಿಯಿಂದ ಯೂಟ್ಯೂಬರ್ ವೊಬ್ಬರು ಸ್ವಲ್ಪದರಲ್ಲೇ ಪಾರಾದ ಘಟನೆ ಮಂಗಳವಾರ ಸಂಜೆ ನಡೆದಿದೆ .


Provided by

ಚಿಕ್ಕಮಗಳೂರು ಜಿಲ್ಲೆಯ ಕಟ್ಟ ಕಡೆಯ ಗ್ರಾಮವಾದ ಬಿದರತಳ ಗ್ರಾಮದ ವಿಡಿಯೋ ಚಿತ್ರೀಕರಣ ಮಾಡಲು ಚನ್ನರಾಯಪಟ್ಟಣ ಮೂಲದ ಅಭಿಷೇಕ್ ಮಂಗಳವಾರ ಸಂಜೆ ಗ್ರಾಮಕ್ಕೆ ಹೋಗಿದ್ದರು.  ಗ್ರಾಮಕ್ಕೆ ಹೋಗಲು ರಸ್ತೆ ಇಲ್ಲದ ಕಾರಣ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆ ಒಂದು ಏಕಾಏಕಿ ದಾಳಿಗೆ ಮುಂದಾಗಿದೆ.

ಯೂಟ್ಯೂಬರ್ ಅಭಿಷೇಕ್ ಕೂದಲೆ ಅಂತರದಲ್ಲಿ ಕಂದಕಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆಯನ್ನು ಕಂಡ ಅಭಿಷೇಕ್ ಕಂದಕಕ್ಕೆ ಜಿಗಿದಿದ್ದರಿಂದ ಕಾಲು ಹಾಗೂ ಮೂಗಿನ ಭಾಗಕ್ಕೆ ಗಂಭೀರ ಪೆಟ್ಟಾಗಿದೆ.


Provided by

ಚನ್ನರಾಯಪಟ್ಟಣ ಮೂಲದ ಅಭಿಷೇಕ್ ಯುನೈಟೆಡ್ ಮೀಡಿಯಾ ಎಂಬ ಯುಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಬಿದರತಳ ಗ್ರಾಮದ ವಿಡಿಯೋ ಚಿತ್ರೀಕರಣಕ್ಕೆ ಮಂಗಳವಾರ ತೆರಳಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ಆರೀಫ್ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಯಿತು.

ಈ ಸಂದರ್ಭದಲ್ಲಿ ಆರೀಫ್ , ನವೀನ್, ಸಂಜಯ್ ಗೌಡ ಕೊಟ್ಟಿಗೆಹಾರ,  ಗಿರೀಶ್, ಸುಂದರೇಶ, ಭಕ್ತಿ ಶ,  ಮೊದಲಾದವರು ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ