ವಿದ್ಯಾರ್ಥಿ ನಾಯಕನ ಹತ್ಯೆ ಆರೋಪಿ ಪೊಲೀಸ್ ವಾಹನ ಡಿಕ್ಕಿ ಹೊಡೆದು ಸಾವು! - Mahanayaka

ವಿದ್ಯಾರ್ಥಿ ನಾಯಕನ ಹತ್ಯೆ ಆರೋಪಿ ಪೊಲೀಸ್ ವಾಹನ ಡಿಕ್ಕಿ ಹೊಡೆದು ಸಾವು!

neeraj
01/12/2021

ಅಸ್ಸಾಂ: ಅಲ್ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ(AASU)ದ ನಾಯಕ ಅನಿಮೇಶ್ ಭೂಯಾನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನೀರಜ್ ದಾಸ್ ಎಂಬಾತ ಪೊಲೀಸ್ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಿಮೇಶ್ ಭೂಯಾನ್ ಹತ್ಯೆ ಕೇಸ್ ನಲ್ಲಿ ನೀರಜ್ ದಾಸ್ ನನ್ನು ಮಂಗಳವಾರ ರಾತ್ರಿ ಪೊಲೀಸರು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಆತ ಪೊಲೀಸ್ ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಓಡಿದ್ದು, ಈ ವೇಳೆ ಹಿಂದಿನಿಂದ ಬಂದ ಇನ್ನೊಂದು ಪೊಲೀಸ್ ಕಾರು ಆತನಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಈ ಸಾವಿನ ಬಗ್ಗೆ ಹಲವಾರು ಅನುಮಾನಗಳು ಕೂಡ ಸೃಷ್ಟಿಯಾಗಿದೆ. ಅನಿಮೇಶ್ ಭೂಯಾನ್ ಹತ್ಯೆ ನಡೆದದ್ದು ಯಾಕೆ? ಎನ್ನುವ ತನಿಖೆ ಇದೀಗ ಪ್ರಮುಖ ಆರೋಪಿಯ ಸಾವಿನೊಂದಿಗೆ ಕೊನೆಯಾಗುವಂತಾಗಿದೆ. ಅನಿಮೇಶ್ ಭೂಯಾನ್ ಹತ್ಯೆಯ ಹಿಂದಿರುವ ಕಾಣದ ಕೈಗಳು ಪ್ರಕರಣವನ್ನು ಮುಚ್ಚಿ ಹಾಕಿದವೇ ಎನ್ನುವ ಪ್ರಶ್ನೆಗಳು ಇದೀಗ ಉದ್ಭವವಾಗಿದೆ.

ಹಿರಿಯ ನಾಗರಿಕರೊಬ್ಬರು ಅಪಘಾತಕ್ಕೀಡಾಗಿದ್ದ ಸಂದರ್ಭದಲ್ಲಿ ಅನಿಮೇಶ್ ಹಾಗೂ ಅವರ ಸ್ನೇಹಿತರು ಅವರನ್ನು ರಕ್ಷಿಸಲು ಮುಂದಾಗುತ್ತಿದ್ದ ವೇಳೆ ಗುಂಪೊಂದು ಅನಗತ್ಯ ಕಲಹ ಸೃಷ್ಟಿಸಿ  ಅನಿಮೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಇದರಿಂದಾಗಿ ಅವರು ಸಾವಿಗೀಡಾಗಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದನ ಸಾಗಾಟದ ವಾಹನ ತಡೆಯಲು ಯತ್ನಿಸಿದ ಯುವಕರ ಮೇಲೆ ಹತ್ತಿದ ಪಿಕಪ್: ಇಬ್ಬರಿಗೆ ಗಂಭೀರ ಗಾಯ

ಯೋಗ ತರಬೇತಿಯ ವೇಳೆ 5 ಯುವತಿಯರಿಗೆ ಲೈಂಗಿಕ ಕಿರುಕುಳ: ತರಬೇತುದಾರನ ವಿರುದ್ಧ ದೂರು

ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ

ದೇವೇಗೌಡರಿಗೆ ಅದ್ದೂರಿ ಸ್ವಾಗತ ನೀಡಿದ ಪ್ರಧಾನಿ ಮೋದಿ: ಫೋಟೋ ವೈರಲ್

ಲಸಿಕೆ ಹಾಕಲು ಬಂದಾಗ ಅಜ್ಜಿಯ ಮೈಮೇಲೆ ಬಂದ ದೇವರು | ತಹಶೀಲ್ದಾರ್ ಮಾಡಿದ ಉಪಾಯ ಏನು ಗೊತ್ತಾ?

ಹಿಂದೂಗಳ ಬೆಳವಣಿಗೆಯ ವಿರುದ್ಧ ಅಸಹನೆ ಬೆಳೆಯುತ್ತಿದೆ | ಪೇಜಾವರ ಶ್ರೀ

ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನ ರಕ್ಷಣೆಗೆ ಮುಂದಾಗಿದ್ದ ಯುವಕನನ್ನು ಥಳಿಸಿಕೊಂದ ಗುಂಪು!

ಇತ್ತೀಚಿನ ಸುದ್ದಿ