ಏಕಾಏಕಿ ಆ್ಯಕ್ಟಿವ್ ಆದ ಸುಶಾಂತ್ ಸಿಂಗ್ ಫೇಸ್ ಬುಕ್ ಖಾತೆ | ಅಭಿಮಾನಿಗಳಿಗೆ ಶಾಕ್
ನಟ ಸುಶಾಂತ್ ಸಿಂಗ್ ಅವರ ಸಾವಿನ ಬಗ್ಗೆ ನಾನಾ ರೀತಿಯ ಅನುಮಾನಗಳಿಗೆ ಇನ್ನೂ ಉತ್ತರ ದೊರಕಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡರೆ ಅಥವಾ ಅವರ ಸಾವು ಕೊಲೆಯೇ ಎಂಬ ಬಗ್ಗೆ ನೂರಾರು ಉತ್ತರವಿಲ್ಲದ ಪ್ರಶ್ನೆಗಳಿವೆ. ಇಂತಹ ಸಂದರ್ಭದಲ್ಲಿಯೇ ಹೊಸ ವರ್ಷದ ದಿನದಂದು ಸುಶಾಂತ್ ಸಿಂಗ್ ಫೇಸ್ ಬುಕ್ ಇದ್ದಕ್ಕಿದ್ದಂತೆಯೇ ಆ್ಯಕ್ಟೀವ್ ಆಗಿದೆ.
ಹೌದು… ! ಹೊಸ ವರ್ಷದಂದು ಸುಶಾಂತ್ ಅವರ ಅಧಿಕೃತ ಫೇಸ್ ಬುಕ್ ಖಾತೆಯಿಂದ ಹೊಸ ವರ್ಷದ ಶುಭಾಶಯ ಹೇಳಲಾಗಿದೆ. ಈ ಪೋಸ್ಟ್ ನೋಡಿ ಅಭಿಮಾನಿಗಳು ಶಾಕ್ ಗೊಳಗಾಗಿದ್ದಾರೆ. ಅಭಿಮಾನಿಗಳು ಹಲವು ರೀತಿಯ ಭಾವನಾತ್ಮಕ ಸಂದೇಶಗಳನ್ನು ಕಮೆಂಟ್ ಮಾಡಿದ್ದಾರೆ.
ಅಂದ ಹಾಗೆ ಸುಶಾಂತ್ ಸಿಂಗ್ ಅವರ ಫೇಸ್ ಬುಕ್ ಖಾತೆಯಿಂದ ಅವರ ಸಹೋದರಿ ಶ್ವೇತಾ ಸಿಂಗ್ ಅವರು ಹೊಸ ವರ್ಷದ ಶುಭಾಶಯಗಳನ್ನು ಹೇಳಿದ್ದಾರೆ. ನನ್ನ ಸಹೋದರನ ಪರವಾಗಿ ಈ ಶುಭಾಶಯ ತಿಳಿಸುತ್ತಿದ್ದೇನೆ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಮತ್ತು ಎಲ್ಲವು ಉತ್ತಮವಾಗಲಿ ಎಂದು ಕೆಂಪು ಹೃದಯದ ಇಮೋಜಿಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗರ್ಭಿಣಿ ಸಂಜನಾ ಅವರ ಸಂತಸದ ಸಂದರ್ಭದಲ್ಲಿಯೂ ನೋಯಿಸಿದ ಆ ನ್ಯೂಸ್ ಚಾನೆಲ್!
ಶಿಕ್ಷಣಾಧಿಕಾರಿಗೆ ಮೊದಲು ಹೂವಿನ ಹಾರ ಹಾಕಿದರು, ಆ ನಂತರ ಚಪ್ಪಲಿ ಹಾರ ಹಾಕಿದರು
ಟಫ್ ರೂಲ್ಸ್ ಜಾರಿ ಸಾಧ್ಯತೆ: ಸುಳಿವು ನೀಡಿದ ಆರ್.ಅಶೋಕ್
ದೇವರ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥ: 12 ಮಕ್ಕಳು ಸಹಿತ 50 ಮಂದಿ ಅಸ್ವಸ್ಥ
“ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯ ಬದಲು 5 ಕೆ.ಜಿ ಎಲ್ ಪಿಜಿ ಗ್ಯಾಸ್”