ಇಲ್ಲಿ ಅಪಘಾತ ಆದ ಸ್ಥಳದಲ್ಲಿ ನಿಂತ್ರೆ ದಂಡ ಬೀಳುತ್ತೆ..!
ಅಪಘಾತ ಆದಾಗ ಸಾಮಾನ್ಯವಾಗಿ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಕುತೂಹಲದಿಂದ ವಿಚಾರಿಸುವುದಿದೆ. ಆದರೆ ಇನ್ಮುಂದೆ ಅಬುಧಾಬಿಯಲ್ಲಿ ನೀವು ಹೀಗೆ ಮಾಡಿದರೆ ನಿಮಗೆ ದಂಡ ವಿಧಿಸಲಾಗುತ್ತದೆ. ಅಪಘಾತದ ಸ್ಥಳದಲ್ಲಿ ಜನರು ಗುಂಪು ಗೂಡುವುದನ್ನು ಅಬುಧಾಬಿ ಪೊಲೀಸ್ ನಿಷೇಧಿಸಿದೆ.
ರಕ್ಷಣಾ ಕಾರ್ಯ ಚಟುವಟಿಕೆಗಳಿಗೆ ಅಡ್ಡಿ ಉಂಟು ಮಾಡುವ ರೀತಿಯಲ್ಲಿ ಗುಂಪು ಗೂಡಿದರೆ ಸಾವಿರ ದಿರ್ ಹಂ ದಂಡ ವಿಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಪಘಾತದ ಸ್ಥಳವನ್ನು ನೋಡುವುದಕ್ಕಾಗಿ ಮತ್ತು ವಿಡಿಯೋ ಮಾಡುವುದಕ್ಕಾಗಿ ಜನರು ಗುಂಪುಗೂಡುವುದರಿಂದ ಅಲ್ಲಿಗೆ ರಕ್ಷಣಾ ಚಟುವಟಿಕೆಯ ವಾಹನಗಳು ತಲುಪುವುದಕ್ಕೆ ತೊಂದರೆಯಾಗುತ್ತದೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವುದಕ್ಕೂ ಅನನುಕೂಲವಾಗುತ್ತದೆ.
ಆದ್ದರಿಂದ ಜನರು ಗುಂಪುಗೂಡುವುದನ್ನು ನಿಲ್ಲಿಸಬೇಕು, ಹಾಗೆಯೇ ಅಪಘಾತದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw