ಹಿಂದೂ ಪದಕ್ಕೆ ಕೆಟ್ಟ ಅರ್ಥ ಇದೆ: ಸಂಚಲನ ಸೃಷ್ಟಿಸಿದ ಇಸ್ಕಾನ್ ವೆಬ್ ಸೈಟ್ ನಲ್ಲಿರುವ ಲೇಖನ - Mahanayaka
3:05 PM Saturday 14 - December 2024

ಹಿಂದೂ ಪದಕ್ಕೆ ಕೆಟ್ಟ ಅರ್ಥ ಇದೆ: ಸಂಚಲನ ಸೃಷ್ಟಿಸಿದ ಇಸ್ಕಾನ್ ವೆಬ್ ಸೈಟ್ ನಲ್ಲಿರುವ ಲೇಖನ

iscon
13/11/2022

ಹಿಂದೂ ಪದಕ್ಕೆ ಕೆಟ್ಟ ಅರ್ಥ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಸ್ ಜಾರಕಿಹೊಳಿ ನೀಡಿದ ಹೇಳಿಕೆ ಇತ್ತೀಚೆಗೆ ಭಾರೀ ಚರ್ಚೆಗೀಡಾಗಿತ್ತು. ಈ ಹೇಳಿಕೆ ಬಲಪಂಥೀಯ ಮುಖಂಡರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೆ, ಇಸ್ಕಾನ್ ನ ವೆಬ್ ಸೈಟ್ ನಲ್ಲಿ ಕೂಡ ಹಿಂದೂ ಪದಕ್ಕೆ ಕೆಟ್ಟ ಅರ್ಥ ಇದೆ ಎಂಬ ಲೇಖನವೊಂದು ಪ್ರಕಟವಾಗಿದ್ದು, ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆಗಳು ಆರಂಭವಾಗಿದೆ.

ಕಾಂಗ್ರೆಸ್ ಮುಖಂಡ ಹಾಗೂ ವಕೀಲರಾದ ಭೀಮನಗೌಡ ಪರಗೊಂಡ ಅವರು ಇಸ್ಕಾನ್ ನ ವೆಬ್ ಸೈಟ್ ನಲ್ಲಿ ನಂದ ನದನದಾಸ ಎಂಬವರು ಬರೆದಿರುವ ಲೇಖನದ ಲಿಂಕ್ ನ್ನು ಟ್ವೀಟ್ ಮಾಡಿದ್ದು, “ನಂದ ನಂದನದಾಸ ಎಂಬುವವರ ಹತ್ತಾರು ಲೇಖನಗಳನ್ನು ಇಸ್ಕಾನ್ ಸಂಸ್ತೆಯ ಜಾಲತಾಣಗಳಲ್ಲಿ ಬರೆದಿರುವ ಇಸ್ಕಾನ್ ಸದಸ್ಯರು 4 ವರ್ಷಗಳ ಹಿಂದೆಯೇ ʼಹಿಂದುʼ ಎಂದರೆ ಕಳ್ಳ,ಕರಿಯ ಎಂದಿದ್ದಾರೆ.ಸತೀಶ್ ಜಾರಕಿಹೊಳಿಯವರ ವಿರುದ್ದ ಹರಿಹಾಯ್ದವರು ಇಸ್ಕಾನ್ ವಿರುದ್ದ ಉಸಿರೆತ್ತುತ್ತಾರಾ? @BJP4Karnataka ಇಸ್ಕಾನ್ ಬೆಂಗಳೂರು ಎಂದು ಪ್ರಶ್ನಿಸಿದ್ದಾರೆ.

1964 ರಲ್ಲಿ ಲಕ್ನೋದಲ್ಲಿ ಪ್ರಕಟವಾದ ಲುಘೆತ್-ಎ-ಕಿಶ್ವರಿ ಎಂಬ ಪರ್ಷಿಯನ್ ನಿಘಂಟಿನಲ್ಲಿ ಹಿಂದೂ ಪದಕ್ಕೆ “ಚೋರ್ [ಕಳ್ಳ], ಡಕೂ [ಡಕಾಯಿತ್], ರಾಹ್ಜಾನ್ [ವೇಲೇಯರ್] ಮತ್ತು ಗುಲಾಮ್ [ಗುಲಾಮ] ಎಂಬ ಅರ್ಥವನ್ನು ನೀಡುತ್ತದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.

ಹಿಂದೂ ಎಂಬ ಹೆಸರಿನ ಮೂಲದ ಇನ್ನೊಂದು ದೃಷ್ಟಿಕೋನವು ಅವಹೇಳನಕಾರಿ ಅರ್ಥವನ್ನು ಆಧರಿಸಿದೆ. “ಇದಲ್ಲದೆ, ಈ ಹೆಸರನ್ನು [ಹಿಂದೂ] ಮೂಲ ಆರ್ಯ ಜನಾಂಗಕ್ಕೆ ಮುಸ್ಲಿಂ ಆಕ್ರಮಣಕಾರರು ಅವಮಾನಿಸಲು ನೀಡಿರುವುದಾಗಿದೆ. ನಮ್ಮ ಲೇಖಕರು ಹೇಳುವಂತೆ ಪರ್ಷಿಯನ್ ಭಾಷೆಯಲ್ಲಿ ಈ ಪದದ ಅರ್ಥ ಗುಲಾಮ. ಇಸ್ಲಾಂ ಪ್ರಕಾರ, ಇಸ್ಲಾಂ ಧರ್ಮವನ್ನು ಸ್ವೀಕರಿಸದ ಎಲ್ಲರನ್ನು ಗುಲಾಮರು ಎಂದು ಕರೆಯಲಾಗುತ್ತದೆ” (ಉಲ್ಲೇಖ: 1898ರಲ್ಲಿ ಲಾಹೋರ್ನಲ್ಲಿ ಪ್ರಕಟವಾಗಿರುವ ಮಹರ್ಷಿ ಶ್ರೀ ದಯಾನಂದ ಸರಸ್ವತಿಯವರ ಕೃತಿ) ಎಂದು ಹೇಳಲಾಗಿದೆ.

ಇಸ್ಕಾನ್ ಸಂಸ್ಥೆಯ ವೆಬ್ ಸೈಟ್ ನಲ್ಲೇ ಇಂತಹದ್ದೊಂದು ವಿಶ್ಲೇಷಣೆ ಕಂಡು ಬಂದಿದೆ. ಇತ್ತೀಚೆಗೆ ಸತೀಶ್ ಜಾರಕಿಹೊಳಿ ಅವರು ಈ ಬಗ್ಗೆ ಹೇಳಿಕೆ ನೀಡಿದಾಗ ಎಲ್ಲರೂ ಅವರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದರು. ಹಿಂದೂ ಪದದ ಬಗ್ಗೆ ಹಲವು ಪುಸ್ತಕಗಳಲ್ಲಿ, ಹಲವು ರೀತಿಯ ವ್ಯಾಖ್ಯಾನಗಳಿವೆ. ಹಿಂದೂ ಪದ ಭಾರತೀಯ ಮೂಲದ್ದಲ್ಲ ಎನ್ನುವ ಚರ್ಚೆಗಳು ಮತ್ತಷ್ಟು ಬಲಗೊಳ್ಳುತ್ತಿದೆ. ಈ ಬಗ್ಗೆ ಇನ್ನಷ್ಟು ಚರ್ಚೆಗಳು ಮತ್ತೆ ಆರಂಭವಾಗುವ ಸಾಧ್ಯತೆಗಳು ಕಂಡು ಬಂದಿದೆ.

ಈ ಲೇಖನದ ಲಿಂಕ್ ಇಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಳನ್ನು ಓದುಗರು ಓದಬಹುದಾಗಿದೆ:

ಕ್ಲಿಕ್ ಮಾಡಿ: https://www.iskconbangalore.co.in/about-the-name-hindu/

ಇತ್ತೀಚಿನ ಸುದ್ದಿ