ABVP ಸಮಾಜಕ್ಕೆ ಉತ್ತಮ ವ್ಯಕ್ತಿತ್ವದ ನಾಗರಿಕರನ್ನು ನೀಡುತ್ತಿದೆ | ಪುಷ್ಪರಾಜ್ ಜೈನ್ - Mahanayaka

ABVP ಸಮಾಜಕ್ಕೆ ಉತ್ತಮ ವ್ಯಕ್ತಿತ್ವದ ನಾಗರಿಕರನ್ನು ನೀಡುತ್ತಿದೆ | ಪುಷ್ಪರಾಜ್ ಜೈನ್

14/01/2021

ಮಂಗಳೂರು: ವಿವೇಕಾನಂದರ ಆದರ್ಶದೊಂದಿಗೆ  ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಸಂಘಟನೆ  ಸಮಾಜಕ್ಕೆ ಉತ್ತಮ ವ್ಯಕ್ತಿತ್ವವುಳ್ಳ ನಾಗರಿಕರನ್ನು ನೀಡುತ್ತಿದೆ. ಇಂತಹ ಸಂಘಟನೆಯ ಸಂಪರ್ಕದಲ್ಲಿರಲು ನಾನು ಬಯಸುತ್ತೇನೆ ಎಂದು  ಮಂಗಳೂರಿನ ಖ್ಯಾತ ಉದ್ಯಮಿಯಾದ ಪುಷ್ಪರಾಜ್ ಜೈನ್ ಹೇಳಿದರು.


Provided by

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಆಯೋಜಿಸಿದ್ದ ವಿವೇಕ ಸ್ಪರ್ಧೆ -2021 ಹಾಗೂ ರಕ್ತದಾನ ಶಿಬಿರವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರವೀಂದ್ರನಾಥ ರೈ ,   ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ದೀಪ್ತಿ , ನಗರ ಅಧ್ಯಕ್ಷೆ ಭಾರತಿ ಪ್ರಭು ,  ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು .

ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಬರ್ಕೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಜ್ಯೋತಿರ್ಲಿಂಗ ಅವರು ಮಾತನಾಡಿ, ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ ಸಂತನ ಜಯಂತಿಯನ್ನು ಆಚರಿಸುವುದರೊಂದಿಗೆ ನಾವೆಲ್ಲರೂ ಈ ಸಂಸ್ಕೃತಿಯನ್ನು ಸಂಸ್ಕಾರದೊಂದಿಗೆ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದು ಹೇಳಿದರು.

ರಕ್ತದಾನ ಶಿಬಿರದಲ್ಲಿ ನಲವತ್ತೈದು ಯೂನಿಟ್ ರಕ್ತವನ್ನು ವಿದ್ಯಾರ್ಥಿಗಳು ನೀಡಿದರು ಸ್ಪರ್ಧೆಯಲ್ಲಿ 80 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು . ವಿಜೇತರಿಗೆ ನಗದು ಪುಸ್ತಕ ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು .

ಸಮಾರೋಪ ಸಮಾರಂಭದಲ್ಲಿ ವಿಭಾಗ ಪ್ರಮುಖರಾದ  ಕೇಶವ ಬಂಗೇರ , ಪ್ರಾಂತ ಕಾರ್ಯ ಸಮಿತಿ ಸದಸ್ಯ ಮಣಿಕಂಠ ಕಳಸ,  ತಾಲ್ಲೂಕು ಸಂಚಾಲಕ ನಿಶಾನ್ ಆಳ್ವ ಉಪಸ್ಥಿತರಿದ್ದರು .

 

ಇತ್ತೀಚಿನ ಸುದ್ದಿ