ಮಕ್ಕಾದ ಮಸ್ಜಿದ್ ಹರಾಮ್ ನಲ್ಲಿ ಎಸಿ ವ್ಯವಸ್ಥೆ: ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯತೆ - Mahanayaka
5:34 AM Saturday 21 - September 2024

ಮಕ್ಕಾದ ಮಸ್ಜಿದ್ ಹರಾಮ್ ನಲ್ಲಿ ಎಸಿ ವ್ಯವಸ್ಥೆ: ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯತೆ

02/09/2024

ಮಕ್ಕಾದ ಮಸ್ಜಿದ್ ಹರಾಮ್ ಗೆ ಜೋಡಿಸಲಾಗಿರುವ ಎಸಿ ವ್ಯವಸ್ಥೆಯು ಜಗತ್ತಿನಲ್ಲಿ ಅತ್ಯಂತ ದೊಡ್ಡದೆಂದು ಗುರುತಿಸಲಾಗಿದೆ. 1,55,000 ಟನ್ ಸಾಮರ್ಥ್ಯದ ಈ ಎಸಿ ವ್ಯವಸ್ಥೆ ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯವಾಗಿದೆ.

ಹರಮ್ ನ ಎರಡು ಸ್ಥಳಗಳಲ್ಲಿ ಈ ಎಸಿ ವ್ಯವಸ್ಥೆ ಮಾಡಲಾಗಿದೆ. ಶಾಮಿಯ ಮತ್ತು ಅಜಿಯಾದ್ ಎಂಬ ಸ್ಥಳಗಳಲ್ಲಿ ಈ ಎಸಿಯನ್ನು ವ್ಯವಸ್ಥೆ ಗೊಳಿಸಲಾಗಿದೆ. ಈ ಮೂಲಕ 1,55,000 ಟನ್ ಸಾಮರ್ಥ್ಯದ ಏಸಿ ಕಾರ್ಯಪ್ರವೃತ್ತವಾಗಿದೆ. ಹರಮ್ ನಿಂದ ಬೇರೆ ಬೇರೆ ದೂರಗಳಲ್ಲಿ ಇದನ್ನು ವ್ಯವಸ್ಥೆಗೊಳಿಸಲಾಗಿದೆ.

ಪ್ರತಿದಿನ 9 ಬಾರಿ ಅಲ್ಟ್ರಾ ವೈಲೆಟ್ ಕಿರಣಗಳನ್ನು ಉಪಯೋಗಿಸಿ ಅಣು ಮುಕ್ತಗೊಳಿಸಿದ ಬಳಿಕ ತಂಪು ಗಾಳಿ ಹರಂಗೆ ತಲುಪುತ್ತದೆ. ಹರಂಗೆ ಭೇಟಿ ಕೊಡುವವರ ಸಂಖ್ಯೆಯನ್ನು ಪರಿಗಣಿಸಿ ತಂಪುಗಾಳಿಯನ್ನು ಹೆಚ್ಚು ಅಥವಾ ಕಡಿಮೆಗೊಳಿಸಲಾಗುತ್ತದೆ. ಈ ವ್ಯವಸ್ಥೆಯು ಹರಮ್ ನ ಒಳಗೆ ಅತ್ಯಂತ ಸಮತೋಲಿತ ವಾತಾವರಣವನ್ನು ಉಂಟು ಮಾಡುತ್ತದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ