ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮನೆಗೆ ಎಸಿಬಿ ದಾಳಿ: ಸಿಕ್ಕಿದ ಚಿನ್ನಾಭರಣಗಳೆಷ್ಟು ಗೊತ್ತಾ?
ಉಡುಪಿ: ಸಣ್ಣ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಎಂಜಿನಿಯರ್ ಹರೀಶ್ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಜೂ 17ರ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದು, ಈ ವೇಳೆ ಚಿನ್ನದ ತಟ್ಟೆ ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣಗಳು ಪತ್ತೆಯಾಗಿದೆ.
ಅಧಿಕಾರಿಗಳ ಪರಿಶೀಲನೆ ಸಮಯದಲ್ಲಿ ಎರಡು ಕೆಜಿಗೂ ಅಧಿಕ ಚಿನ್ನಾಭರಣ, ಸುಮಾರು 5 ಲಕ್ಷ ರೂಪಾಯಿ ನಗದು, ದುಬಾರಿ ಬೆಲೆಯ ವಾಚು, ಮೂರು ವಾಹನ, ಚಿನ್ನದ ತಟ್ಟೆ, ಚಿನ್ನದ ತಗಡು ಅಲ್ಲದೆ 15 ಕ್ಕೂ ಹೆಚ್ಚು ಚಿನ್ನದ ಬಳೆ, 30 ಕ್ಕೂ ಹೆಚ್ಚು ಸರ, ನೆಕ್ಲಸ್, ಬ್ರಾಸ್ಕೆಟ್, ಚಿನ್ನದ ಒಡವೆಗಳು, ಉಂಗುರ ದೇವರ ಮೂರ್ತಿಗಳು ಪತ್ತೆಯಾಗಿವೆ. ಅಲ್ಲದೆ ಆಸ್ತಿ ಪತ್ರ ದಾಖಲೆಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಡಿವೈಎಸ್ಪಿ ಮಂಜುನಾಥ ಕವರಿ ಸೇರಿದಂತೆ 15 ಅಧಿಕಾರಿಗಳ ತಂಡ ಮನೆ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ಪ್ರಗತಿಯಲ್ಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ಫಲಿತಾಂಶ ನೋಡುವುದು ಹೇಗೆ?
ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಬಹಿಷ್ಕಾರಕ್ಕೆ ಬಲಪಂಥೀಯರ ಕರೆ!
ಮಠದ ಸ್ನಾನದ ಗೃಹದಲ್ಲಿ ಸ್ವಾಮೀಜಿಯ ಅನುಮಾನಾಸ್ಪದ ಸಾವು!
ಮಗುವಿಗೆ ಅರಿಶಿಣ ಕುಂಕುಮ ಬಲವಂತವಾಗಿ ತಿನ್ನಿಸಿದ ತಂದೆ: ಬಾಲಕಿಯ ಸ್ಥಿತಿ ಚಿಂತಾಜನಕ
ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಿದ್ದ ಒಂಟಿ ಮಹಿಳೆಯನ್ನು ಇರಿದು ಬರ್ಬರ ಹತ್ಯೆ!