ಎಸಿಬಿ ಶಾಕ್‌: ಬೆಳ್ಳಂಬೆಳಗ್ಗೆ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ದಾಳಿ - Mahanayaka
6:20 AM Friday 20 - September 2024

ಎಸಿಬಿ ಶಾಕ್‌: ಬೆಳ್ಳಂಬೆಳಗ್ಗೆ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ದಾಳಿ

acb
22/03/2022

ಬೆಂಗಳೂರು:  ಮೊದಲ ಬಾರಿಗೆ, ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು, ಒಟ್ಟು 100ಕ್ಕೂ ಹೆಚ್ಚು ಅಧಿಕಾರಿಗಳು ಬೆಂಗಳೂರಿನ 9 ಕಡೆ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಇತ್ತೀಚೆಗೆ ಬಿಬಿಎಂಪಿ, ಬಿಡಿಎಗೆ ಸಂಬಂಧಿಸಿದ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಸೇರಿ ಅವ್ಯವಾಹರದಲ್ಲಿ ತೊಡಗಿದ್ದ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಎಸಿಬಿ ಅಧಿಕಾರಿಗಳು  ಬ್ರೋಕರ್‌ಗಳಾದ ರಘು ಬಿ. ಎನ್.ಚಾಮರಾಜಪೇಟೆ, ಮೋಹನ್ ಮನೋರಾಯನಪಾಳ್ಯ, ಮನೋಜ್ ದೊಮ್ಮಲೂರು, ಮುನಿರತ್ನ ರತ್ನವೇಲು ಮಲ್ಲತ್ತಹಳ್ಳಿ, ತೇಜುತೇಜಸ್ವಿ ಆರ್‍ಆರ್ ನಗರ, ಅಶ್ವತ್ ಮುದ್ದಿನಪಾಳ್ಯ, ಲಕ್ಷ್ಮಣ ಚಾಮುಂಡೇಶ್ವರಿ ನಗರ, ಚಿಕ್ಕಹನುಮ್ಮಯ್ಯ ಮುದ್ದಿನಪಾಳ್ಯ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಕ್ರೇನ್ ನಿಂದ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

ಅಪ್ರಾಪ್ತ ಮಕ್ಕಳನ್ನು ಬಿಟ್ಟು ಗೆಳೆಯನ  ಜತೆ ಓಡಿ ಹೋದ ತಾಯಿ

ಹಕ್ಕಿಯನ್ನು ಹುಡುಕಲು ಹೋದ ಮಕ್ಕಳು: ಅಮೆಜಾನ್ ಕಾಡಿನಲ್ಲಿ ಸಿಲುಕಿ 27 ದಿನ ಜೀವನ್ಮರಣ ಹೋರಾಟ

ಖ್ಯಾತ ಜ್ಯೋತಿಷಿಯ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ

ಇತ್ತೀಚಿನ ಸುದ್ದಿ