ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ: ಸ್ಥಳದಲ್ಲಿಯೇ ಇಬ್ಬರು ಸಾವು - Mahanayaka

ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ: ಸ್ಥಳದಲ್ಲಿಯೇ ಇಬ್ಬರು ಸಾವು

21/11/2020

ಹುಬ್ಬಳ್ಳಿ: ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ ಕಾರು ಎನ್ನಲಾದ ಕಾರು ಅಪಘಾತಕ್ಕೀಡಾಗಿದ್ದು, ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಗದಗ-ಹುಬ್ಬಳ್ಳಿ ರಸ್ತೆಯ ಬಂಡಿವಾಡ ಬಳಿ ನಡೆದಿದೆ.

ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವಾ ಕಾರು ಮತ್ತು ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಬಲೆನೋ ಕಾರಿನ ನಡುವೆ ಶುಕ್ರವಾರ ರಾತ್ರಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Provided by

ಇತ್ತೀಚಿನ ಸುದ್ದಿ