ಭೀಕರ ಅಪಘಾತ | ಐವರು ಸ್ಥಳದಲ್ಲೇ ಸಾವು | 34 ಜನರಿಗೆ ತೀವ್ರ ಸ್ವರೂಪದ ಗಾಯ
21/10/2020
ಮಹಾರಾಷ್ಟ್ರ: ಭೀಕರ ಬಸ್ ಅಪಘಾತವೊಂದರಲ್ಲಿ 5 ಜನರು ದಾರುಣವಾಗಿ ಮೃತಪಟ್ಟು, 34ಕ್ಕೂ ಅಧಿಕ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ವಿಸರ್ವಾಡಿ ಸಮೀಪದ ಕೊಂಡೈವಾಡಿ ಘಾಟ್ ಬಳಿಯಲ್ಲಿ ನಡೆದಿದೆ.
ಮಲ್ಕಾಪುರದಿಂದ ಸೂರತ್ ಗೆ ಪ್ರಯಾಣಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ. ಇದರ ಪರಿಣಾಮವಾಗಿ ಬಸ್ ನ ಚಾಲಕ, ಕ್ಲೀನರ್ ಸೇರಿದಂತೆ ಒಟ್ಟು 5 ಜನರು ಮೃತಪಟ್ಟಿದ್ದಾರೆ.
34 ಗಾಯಾಳುಗಳ ಪೈಕಿ 31 ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಂದರ್ಬಾರ್ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಇತರ ತುರ್ತು ಸಿಬ್ಬಂದಿ ಆಗಮಿಸಿ ನೆರವು ನೀಡುತ್ತಿದ್ದಾರೆ.