ಯಡಿಯೂರಪ್ಪ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ಅನಾಹುತ
ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪೈಲಟ್ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲೇ ಅನಾಹುತ ತಪ್ಪಿದ ಘಟನೆ ಸೋಮವಾರ ನಡೆದಿದೆ.
ಜೇವರ್ಗಿ ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಯಡಿಯೂರಪ್ಪ ಅವರು ಹೆಲಿಕಾಪ್ಟರ್’ನಲ್ಲಿ ಆಗಮಿಸಿದರು. ವಿಜಯಪುರ- ಕಲಬುರಗಿ ರಸ್ತೆ ಬದಿಯ ಜಮೀನಿನಲ್ಲಿನ ಹೆಲಿಪ್ಯಾಡ್’ನಲ್ಲಿ ಹೆಲಿಕಾಪ್ಟರ್ ಟೇಕಾಫ್ ಆಗುತ್ತಿತ್ತು. ಹೆಲಿಪ್ಯಾಡ್ ಸಮೀಪದ ಜಮೀನಿನಲ್ಲಿ ಪ್ಲಾಸ್ಟಿಕ್ ಬ್ಯಾರೆಲ್, ಹೆಲ್ಮೆಟ್, ಪ್ಲಾಸ್ಟಿಕ್ ಚೀಲಗಳು ಗಾಳಿಯಲ್ಲಿ ತೇಲಾಡಿದವು.
ಹೆಲಿಕಾಪ್ಟರ್ ಪೈಲಟ್ ಸಮಯಪ್ರಜ್ಞೆ ಮೆರೆದು ತಕ್ಷಣವೇ ಟೇಕಾಪ್ ಮಾಡದೆ ಮೇಲ್ಮುಖವಾಗಿ ಹಾರಾಟ ನಡೆಸಿದರು. ಒಂದು ಸುತ್ತು ಹಾಕಿ ಹೆಲಿಪ್ಯಾಡ್’ನ ಮತ್ತೊಂದು ಭಾಗದಿಂದ ನಿಧಾನಕ್ಕೆ ಟೇಕಾಫ್ ಮಾಡಿದರು. ಯಡಿಯೂರಪ್ಪ ಅವರು ಸುರಕ್ಷಿತವಾಗಿ ಇಳಿದರು.
ಪಿಡಿಬ್ಲುಡಿ ಇಲಾಖೆಯ ದಿವ್ಯ ನಿರ್ಲಕ್ಷ:
ಹೆಲಿಕಾಪ್ಟರ್ ಲ್ಯಾಂಡಿಂಗ್ ಸ್ಥಳವನ್ನು ಪಿಡಬ್ಲುಡಿ ಇಲಾಖೆ ಸ್ವಚ್ಚ ಮಾಡಿ ಕೊಡಬೇಕಿತ್ತು. ಆದರೆ ಯಾವುದೇ ರೀತಿಯ ಸ್ವಚ್ಛತೆ ಮಾಡದೆ ಲ್ಯಾಂಡಿಂಗ್ ಅನುಮತಿ ನೀಡಿ, ನಿರ್ಲಕ್ಷ್ಯ ವಹಿಸಿದೆ ಎಂದು ಪೈಲಟ್ ಜೋಸೆಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲ್ಯಾಂಡಿಂಗ್ ಟೈಮ್ ನಲ್ಲಿರುವ ಪ್ರೋಟೊಕಾಲ್ ಫಾಲೋ ಮಾಡಬೇಕಿತ್ತು. ಆದರೆ ಅದ್ಯಾವುದು ಕೂಡ ಫಾಲೋ ಅಪ್ ಆಗಿಲ್ಲ ಅನ್ನುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.
ಹೆಲಿಕಾಪ್ಟರ್ ಲ್ಯಾಂಡಿಂಗ್ ಬೇಕಾದ ಎಲ್ಲಾ ನಿಯಮಗಳನ್ನು ಪಿಡಬ್ಲುಡಿ ಇಲಾಖೆ ಉಲ್ಲಂಘನೆ ಮಾಡಿದೆ. ಮಾತ್ರವಲ್ಲೇ ಭದ್ರತಾ ವೈಫಲ್ಯವಾದರೂ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಅರೋಪಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw