ಕಾರು ಅಡ್ಡಗಟ್ಟಿ ಗುಂಡು ಹಾರಿಸಿ ಹುಚ್ಚಾಟ ಮೆರೆದ ಆರೋಪಿ ಅರೆಸ್ಟ್ - Mahanayaka
3:48 PM Tuesday 18 - February 2025

ಕಾರು ಅಡ್ಡಗಟ್ಟಿ ಗುಂಡು ಹಾರಿಸಿ ಹುಚ್ಚಾಟ ಮೆರೆದ ಆರೋಪಿ ಅರೆಸ್ಟ್

roshan
13/02/2025

ಚಿಕ್ಕಮಗಳೂರು: ವ್ಯಕ್ತಿಯೊಬ್ಬ ಕಾರು ಅಡ್ಡಗಟ್ಟಿ ಗುಂಡು ಹಾರಿಸಿ ಹುಚ್ಚಾಟ ಮೆರೆದ ಘಟನೆ ಬೇಲೂರು ಮೂಡಿಗೆರೆ ನಡುವಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುಂಡು ಹಾರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಡಿಗೆರೆ ತಾಲೂಕಿನ ಕಸ್ಕೆಬೈಲು ಗ್ರಾಮದ ರೋಷನ್ ಎಂದು ಗುರುತಿಸಲಾಗಿದೆ.

ಸ್ನೇಹಿತರಾದ ಉಮೇಶ್, ಯೋಗೇಶ್, ಪ್ರಭಾಕರ್, ಶರತ್ ಮತ್ತು ಕುಮಾರ್ ಕಾರಿನಲ್ಲಿ ಗೋಣಿಬೀಡು ಗ್ರಾಮದ ಕಾರ್ತಿಕ್ ಎಂಬವರ ಮನೆಯಲ್ಲಿ ಊಟ ಮುಗಿಸಿ ರಾತ್ರಿ ವಾಪಸ್ ಆಗುತ್ತಿದ್ದರು. ಈ ವೇಳೆ ರೋಷನ್ ಹಾಗೂ ಸ್ನೇಹಿತರು ಕಸ್ಕೆಬೈಲಿನ ಚರ್ಚ್ ಬಳಿ ವಾಹನ ನಿಲ್ಲಿಸಿಕೊಂಡು ಪಾರ್ಟಿ ಮಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬಂದ ಕಾರನ್ನು ತಡೆದ ರೋಷನ್ ಹಾಗೂ ಸ್ನೇಹಿತರು, ರಾತ್ರಿ ವೇಳೆ ಇಲ್ಲಿ ಏಕೆ ಓಡಾಡುತ್ತಿದ್ದೀರಾ ಎಂದು ಕೇಳಿದ್ದಾರೆ. ಇದನ್ನು ಕೇಳಲು ನೀನ್ಯಾರು ಎಂದು ಯೋಗೇಶ್ ಕೇಳಿದಾಗ ರೋಷನ್ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಯೋಗೀಶ್ ಸ್ನೇಹಿತರು ಎಲ್ಲರನ್ನೂ ಸಮಾಧಾನ ಮಾಡಿ ಅಲ್ಲಿಂದ ಹೊರಟ್ಟಿದ್ದಾರೆ.

ರೋಷನ್ ಮತ್ತೆ ಜೀಪ್‍ನಲ್ಲಿ  ಬಂದು ಚೀಕನಹಳ್ಳಿ ಬಳಿ ಕಾರು ಅಡ್ಡಗಟ್ಟಿದ್ದ. ಬಳಿಕ ಏಕಾಏಕಿ ಥಾರ್ ಜೀಪಿನಿಂದ ಬಂದೂಕು ತೆಗೆದು ಗುಂಡು ಹಾರಿಸಿದ್ದ. ಗುಂಡು ಕಾರಿನ ಎಡ ಭಾಗದ ಚಕ್ರಕ್ಕೆ ತಗುಲಿದ್ದು, ಅದೃಷ್ಟವಶಾತ್ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆರೋಪಿಯ ವಿರುದ್ಧ ಯೋಗೇಶ್ ಹಾಗೂ ಉಮೇಶ್ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ರೋಷನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ