ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ಪ್ರಕರಣ: ಜಾಮೀನು ಪಡೆದ ನಾಲ್ಕೇ ದಿನದಲ್ಲಿ ಆರೋಪಿ ಮುರುಘಾಶ್ರೀ ಅರೆಸ್ಟ್
20/11/2023
ದಾವಣಗೆರೆ: ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಸ್ವಾಮೀಜಿ ಮುರುಘಾಶ್ರೀ ಜಾಮೀನು ಪಡೆದು ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಮತ್ತೆ ಅರೆಸ್ಟ್ ಆಗಿದ್ದಾರೆ.
ವಿಚಾರಣೆಗೆ ಕೋರ್ಟ್ ಗೆ ಹಾಜರಾಗದೇ, ವಿಡಿಯೋ ಕಾನ್ಫರೆನ್ಸ್ ನಲ್ಲಿ ಹಾಜರಾಗುವುದಾಗಿ ಆರೋಪಿ ಸ್ವಾಮೀಜಿ ಪಟ್ಟು ಹಿಡಿದ್ದಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿತ್ತು.
ತನಿಖಾಧಿಕಾರಿ ಡಿವೈಎಸ್ ಪಿ ಅನಿಲ್, ಸಿಪಿಐ ಮುದ್ದುರಾಜ್ ನೇತೃತ್ವದ ಅಧಿಕಾರಿಗಳ ತಂಡ ಮಠಕ್ಕೆ ಆಗಮಿಸಿತ್ತು. ಬಳಿಕ ಆರೋಪಿ ಶ್ರೀಯ ಕೋಣೆಗೆ ತೆರಳಿ ಅರೆಸ್ಟ್ ವಾರೆಂಟ್ ತೋರಿಸಿ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:
ಲೈಂಗಿಕ ದೌರ್ಜನ್ಯದ ಆರೋಪಿ ಮುರುಘಾಶ್ರೀ ಮತ್ತೆ ಬಂಧನ ಸಾಧ್ಯತೆ: ಮಠಕ್ಕೆ ಆಗಮಿಸಿದ ಪೊಲೀಸರು