ಸುಳ್ಳು ಭರವಸೆ ನೀಡಿ ಗೃಹಿಣಿಯರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ ಆರೋಪ: ವ್ಯಾಪಕ ಟೀಕೆ
ಸಮಾಜ ಸೇವಾ ಸಂಘಟನೆಯ ಹೆಸರಿನಲ್ಲಿ ಮನೆ ಮನೆಗೆ ಬಂದ ತಂಡವೊಂದು ಸುಳ್ಳು ಭರವಸೆ ನೀಡಿ ಗೃಹಿಣಿಯರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ ಘಟನೆ ಚೆನ್ನೈಯಲ್ಲಿ ನಡೆದಿದೆ. ಗೃಹಿಣಿಯರಿಗೆ ಹಣ ಕೊಡುವ ಭರವಸೆ ನೀಡಿ ಫೋನ್ ನಂಬರ್ ಅನ್ನು ಸಂಗ್ರಹಿಸಲಾಗಿತ್ತು. ಓಟಿಪಿಯನ್ನು ಪಡಕೊಳ್ಳಲಾಗಿತ್ತು ನಂತರ ಬಿಜೆಪಿಯಲ್ಲಿ ನೀವು ಸದಸ್ಯರಾಗಿದ್ದೀರಿ ಎಂಬ ಮೆಸೇಜನ್ನು ಕಳುಹಿಸಲಾಗಿದೆ.
ಪುದುಚೆರಿಯ ಮುದಿಯಾಲ್ ಪೇಟದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಬಳಿಕ ಬಿಜೆಪಿಯು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸಮಾಜ ಸೇವಾ ಸಂಘಟನೆಯವರು ಎಂದು ಹೇಳಿಕೊಂಡು ಒಂದು ತಂಡ ನಮ್ಮ ಮನೆಗೆ ಬಂತು. ಅಪಘಾತ ನಡೆದರೆ 10,000 ರೂಪಾಯಿ ಸಹಾಯ ಮಾಡುತ್ತೇವೆ ಎಂದು ಅವರು ಹೇಳಿದರು. ದೀಪಾವಳಿಗೂ ಸಹಾಯ ಮಾಡುತ್ತೇವೆ ಎಂದು ಹೇಳಿದ್ರು. ಆ ಕಾರಣದಿಂದಾಗಿ ನಮಗೆ ಫೋನ್ ನಂಬರ್ ಕೊಡಿ ಎಂದು ಆ ಗುಂಪು ಹೇಳಿತು. ಹಾಗೆ ನಾವು ನಂಬರ್ ಕೊಟ್ಟಿದ್ದೇವೆ. ನಂತರ ಫೋನ್ ಗೆ ಬಂದ ಓ ಟಿ ಟಿ ಯನ್ನು ಈ ಗುಂಪು ಪಡಕೊಂಡಿತು.
ಕೂಡಲೇ ನೀವು ಬಿಜೆಪಿ ಸದಸ್ಯರಾಗಿದ್ದೀರಿ ಎಂಬ ಮೆಸೇಜ್ ಬಂತು. ಆದರೆ ಆಗ ನಾವು ಇದನ್ನು ಗಮನಿಸಲಿಲ್ಲ. ಕೂಡಲೇ ಸಮಾಜ ಸೇವಾ ತಂಡ ಅಲ್ಲಿಂದ ಕಾಲ್ ಕಿತ್ತಿತು. ನಂತರ ಮೆಸೇಜ್ ನೋಡುವಾಗ ಮೋಸ ಹೋದದ್ದು ಗೊತ್ತಾಯಿತು ಎಂದು ಮಹಿಳೆಯರು ತಿಳಿಸಿದ್ದಾರೆ. ಈಗಾಗಲೇ ನೂರಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿ ಹೀಗೆ ಬಿಜೆಪಿಯ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth