ಕೊತ್ತಂಬರಿ ಸೊಪ್ಪು ಬೆಳೆಯ ನಡುವೆ ಗಾಂಜಾ ಬೆಳೆದ ಆರೋಪಿ ಅರೆಸ್ಟ್
ಹನೂರು: ಕೊತ್ತಂಬರಿ ಸೊಪ್ಪಿನ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಜರುಗಿದೆ.
ತಾಲ್ಲೂಕಿನ ಕಂಡಯ್ಯನಪಾಳ್ಯ ಗ್ರಾಮದ ಹನುಮಗೌಡ (40)ಬಂಧಿತ ಆರೋಪಿಯಾಗಿದ್ದಾನೆ.
ಘಟನೆ ವಿವರ : ಚಿಕ್ಕಮಲಾಪುರ ಗ್ರಾಮದ ಸರೋಜಮ್ಮ ಎಂಬವರ ಜಮೀನನ್ನು ಕಂಡಯ್ಯನಪಾಳ್ಯ ಗ್ರಾಮದ ಹನುಮೇಗೌಡ ಎಂಬವವರು ಗುತ್ತಿಗೆ ಪಡೆದು ಕೊತ್ತಂಬರಿ ಸೊಪ್ಪು ಬೆಳೆದಿದ್ದರು. ಕೊತ್ತಂಬರಿ ಸೊಪ್ಪು ಬೆಳೆದಿರುವ ಮಧ್ಯಭಾಗದಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕರಾದ ಸುನೀಲ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ 348 ಗ್ರಾಂ ತೂಕದ ಒಂದು ಗಾಂಜಾ ಗಿಡ ಹಾಗೂ ಆರೋಪಿಯನ್ನು ವಶಕ್ಕೆ ಪಡೆದು ಎನ್ ಡಿಪಿಎಸ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಸಿದ್ದಯ್ಯ ಪೇದೆಗಳಾದ ಸಿದ್ದರಾಜು ಬಿ, ರಮೇಶ್ ಎಂ ಹಾಗೂ ಪ್ರದೀಪ್ ಕುಮಾರ್ ಕೆ ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka