ಮಹಿಳೆಯ ಕೈಯಿಂದ ಮೊಬೈಲ್ ಕಿತ್ತು ಪರಾರಿಯಾಗಿದ್ದ ಆರೋಪಿ ಅರೆಸ್ಟ್

banakkal
04/03/2023

ಕೊಟ್ಟಿಗೆಹಾರ: ತ್ರಿಪುರ ಗ್ರಾಮದಲ್ಲಿ ಮಹಿಳೆಯೊಬ್ಬರಿಂದ ಮೊಬೈಲ್ ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ.

ತ್ರಿಪುರದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿದಿ ಉಮಾ ಎಂಬುವವರು  2021ರ ಆಗಸ್ಟ್ ನಲ್ಲಿ ರಾತ್ರಿ ಸಂಘದ ಕೆಲಸ ಮುಗಿಸಿಕೊಂಡು ತ್ರಿಪುರ ಗ್ರಾಮದ ರಸ್ತೆಯಲ್ಲಿ ಒಬ್ಬರೇ ಹೋಗುತ್ತಿರುವಾಗ ಆರೋಪಿ ಮಣಿ ಹಿಂದಿನಿಂದ ಬಂದು ಉಮಾರವರ ಬಾಯಿಯನ್ನು ಗಟ್ಟಿಯಾಗಿ ಅದುಮಿ ಹಿಡಿದು ಎಳೆದಾಡಿ 12,000 ರೂ. ಬೆಲೆಬಾಳುವ ಮೊಬೈಲ್ ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಘಟನೆ ನಂತರ ತ್ರಿಪುರ ಗ್ರಾಮದ ಸುತ್ತಮುತ್ತ ಹೆಣ್ಣು ಮಕ್ಕಳು ಓಡಾಡಲು ಭಯಪಡುತ್ತಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಒಂದು ವರ್ಷ ಐದು ತಿಂಗಳಿಂದ ಸತತ ಪ್ರಯತ್ನದಿಂದ ಆರೋಪಿ ತ್ರಿಪುರದ ಮಣಿ ಎಂಬುವವರನ್ನು ಬಂಧಿಸಿದ್ದಾರೆ.

ಕಾರ್ಯಚರಣೆಯಲ್ಲಿ ಮೂಡಿಗೆರೆಯ ವೃತ್ತ ನಿರೀಕ್ಷಕರು ಸೋಮಶೇಖರ್, ಸೋಮೇಗೌಡ, ಸಿಬ್ಬಂದಿಗಳಾದ ಗಿರೀಶ್, ಮನು, ಜಗದೀಶ್ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version