ಅಚ್ಚರಿಯ ಹೇಳಿಕೆ: ಚುನಾವಣಾ ರಾಜಕಾರಣದಿಂದ ನಿವೃತ್ತಿ; ವಿಪಕ್ಷ ನಾಯಕ ಸಿದ್ದರಾಮಯ್ಯ - Mahanayaka
8:04 PM Wednesday 11 - December 2024

ಅಚ್ಚರಿಯ ಹೇಳಿಕೆ: ಚುನಾವಣಾ ರಾಜಕಾರಣದಿಂದ ನಿವೃತ್ತಿ; ವಿಪಕ್ಷ ನಾಯಕ ಸಿದ್ದರಾಮಯ್ಯ

siddaramaiha
25/03/2022

ಮೈಸೂರು: ಚುನಾವಣಾ ರಾಜಕಾರಣದಿಂದ ನಾನು ನಿವೃತ್ತಿ ಪಡೆಯುತ್ತೇನೆ. ಆದರೆ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆ ಗೆ ಬಹಳಷ್ಟು ಕ್ಷೇತ್ರದ ನಾಯಕರು ತಮ್ಮಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ಆದರೆ ನಾನು ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಈಗಲೇ ಈ ಬಗ್ಗೆ ತೀರ್ಮಾನ ಮಾಡುವುದಿಲ್ಲ ಎಂದರು.

ವರುಣಾ, ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಿಂದಲೂ ಒತ್ತಡವಿದೆ. ರಾಜಕೀಯ ಜನ್ಮಕೊಟ್ಟ ಚಾಮುಂಡೇಶ್ವರಿ ಕ್ಷೇತ್ರದ ಜನರೇ ನನ್ನನ್ನು ಸೋಲಿಸಿದರು. ಅವರು ನನ್ನ ಸೋಲಿಸಿದರೆಂದು ನಾನು ಅವರನ್ನು ದ್ವೇಷಿಸಲ್ಲ. ಈಗ ಅವರೇ ಮತ್ತೆ ಸ್ಪರ್ಧೆಗೆ ಕರೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರು ನಮ್ಮ ಆರ್‌ಎಸ್‌ಎಸ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಸ್ಪೀಕರ್ ಅವರು ಗುರುವಾರ ಆ ಕುರ್ಚಿಯಲ್ಲಿ ಕುಳಿತು ನಮ್ಮ ಆರ್‌ಎಸ್‌ಎಸ್ ಎಂದಿದ್ದು ತಪ್ಪು. ಸ್ಪೀಕರ್ ಆದ ತಕ್ಷಣ ಅವರು ಪಕ್ಷಾತೀತರಾಗಿರಬೇಕು. ಆದರೆ, ನಿನ್ನೆ ನಮ್ಮ ಆರ್‌ಎಸ್‌ಎಸ್ ಎಂದಿದ್ದು ಸರಿಯಲ್ಲ ಎಂದರು.

ನಾವು ಯಾವಗಲೂ ಆರ್‌ಎಸ್‌ಎಸ್‌ಗೆ ವಿರೋಧವಿದ್ದೇವೆ. ಏಕೆಂದರೆ ಆರ್‌ಎಸ್‌ಎಸ್ ನವರದ್ದು ಮನುವಾದ ಸಂಸ್ಕೃತಿ. ಸ್ವಾತಂತ್ರ್ಯಕ್ಕೆ ಆರ್‌ಎಸ್‌ಎಸ್ ಹೋರಾಡಿಲ್ಲ.‌ ಸಮಾಜ ಒಡೆಯುವುದೇ ಆರ್ ಎಸ್ ಎಸ್ ಅಜೆಂಡಾ. ಇದಕ್ಕೆ ನಾನು ಆರ್ ಎಸ್‌ಎಸ್ ವಿರೋಧಿಸುತ್ತೇನೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಸಕ ರೇಣುಕಾಚಾರ್ಯ ಪುತ್ರಿಗೆ ಎಸ್‌ಸಿ ಪ್ರಮಾಣ ಪತ್ರ: ಸರಕಾರ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಿ; ಸಿದ್ದರಾಮಯ್ಯ

ಅಘಾತಕಾರಿ ಘಟನೆ: ಸರಕು ಸಾಗಣೆ ಹಡಗಿನಿಂದ ನದಿಗೆ ಬಿದ್ದ12 ಟ್ರಕ್‌; 10ಕ್ಕೂ ಹೆಚ್ಚು ಮಂದಿ ಸಾವು

ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಮದರಸಾ ಶಿಕ್ಷಣ ಮಂಡಳಿ ತೀರ್ಮಾನ

ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನು ಬಿಜೆಪಿ ಕೊಂದಿದೆ: ಶಿವರಾಜ್ ತಂಗಡಗಿ

ಇತ್ತೀಚಿನ ಸುದ್ದಿ