ಆ್ಯಸಿಡ್ ದಾಳಿ ಆರೋಪಿ ನಾಗೇಶ್ ನ ಬೈಕ್ ಪತ್ತೆ! - Mahanayaka

ಆ್ಯಸಿಡ್ ದಾಳಿ ಆರೋಪಿ ನಾಗೇಶ್ ನ ಬೈಕ್ ಪತ್ತೆ!

bangalore
02/05/2022

ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿರುವ ನಾಗೇಶ್ ಇನ್ನೂ ಪತ್ತೆಯಾಗಿಲ್ಲ. ಘಟನೆಯ ಬಳಿಕ ತಲೆಮರೆಸಿಕೊಂಡಿರುವ ಆರೋಪಿಯ ಬೈಕ್ ಮೆಜೆಸ್ಟಿಕ್ ಬಳಿಯಲ್ಲಿ ಪತ್ತೆಯಾಗಿದೆ. ಆದರೆ, ಆತನ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ ಎನ್ನಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು 10 ತಂಡಗಳನ್ನು ರಚಿಸಿ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೃತ್ಯದ ಬಳಿಕ ಬೈಕ್ ನ್ನು ಮೆಜೆಸ್ಟಿಕ್ ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು ಆತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಆಯಸಿಡ್ ದಾಳಿಗೊಳಗಾದಂತ ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಆರೋಪಿಯ ಪತ್ತೆಗಾಗಿ ಪೊಲೀಸರು 10 ತಂಡವನ್ನು ರಚಿಸಿದ್ದಾರೆ. ತಿರುಪತಿ, ತಮಿಳುನಾಡಿನ ದೇವಸ್ಥಾನಗಳಲ್ಲಿಯೂ ನಾಗೇಶ್ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕುಟುಂಬ ರಾಜಕಾರಣವನ್ನು ಏಡ್ಸ್ ಗೆ ಹೋಲಿಸಿದ ಯತ್ನಾಳ್!

ಕೆಲಸಕ್ಕೆ ಸೇರಿದ ದಿನವೇ ನರ್ಸ್ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ!

ಬಸ್ಸಿನಿಂದ  ಕೆಸರು ಹಾರಿದ್ದಕ್ಕೆ ಚಾಲಕನಿಗೆ ವ್ಯಕ್ತಿಯಿಂದ ಚಪ್ಪಲಿಯೇಟು!

ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ: ಸ್ವಲ್ಪ ತಡವಾಗಿದ್ದರೆ ನಡೆಯುತ್ತಿತ್ತು ಭಾರೀ ದುರಂತ!

ಪರೋಟ ಸೇವಿಸಿದ ಬಾಲಕನ ದಾರುಣ ಸಾವು: ಪೋಷಕರಿಗೆ ಕಾದಿತ್ತು ಶಾಕಿಂಗ್ ನ್ಯೂಸ್!

ಇತ್ತೀಚಿನ ಸುದ್ದಿ