ಆಸಿಡ್ ದಾಳಿ ಸಂತ್ರಸ್ತೆಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ನಿರಾಕರಣೆ: ಶಾರೂಖ್ ಖಾನ್ ಬಳಿ ಸಹಾಯ ಯಾಚಿಸಿದ ನೊಂದ ಮಹಿಳೆ

ಹೊಸ ಬ್ಯಾಂಕ್ ಖಾತೆಯನ್ನು ತೆರೆಯಲು ಅವಕಾಶ ನಿರಾಕರಿಸಿಲ್ಪಟ್ಟ ಹಿನ್ನೆಲೆಯಲ್ಲಿ ಆಸಿಡ್ ದಾಳಿ ಸಂತ್ರಸ್ತೆಯೊಬ್ಬರು ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಬಳಿ ಸಹಾಯಕ್ಕೆ ಮನವಿ ಮಾಡಿದ್ದಾರೆ.
‘ಆಸಿಡ್ ದಾಳಿ ಸಂತ್ರಸ್ತೆಯಾಗಿರುವ ನನಗೆ ಗೌರವಯುತ ಜೀವನ ನಡೆಸುವುದನ್ನು ನಿಷೇಧಿಸಬಾರದು. ಕೆವೈಸಿ ಪ್ರಕ್ರಿಯೆಗಾಗಿ ನಾನು ಕಣ್ಣು ಮಿಟುಕಿಸಲಾಗದ ಕಾರಣ ನನಗೆ ಬ್ಯಾಂಕ್ ಖಾತೆಯನ್ನು ನಿರಾಕರಿಸಿರುವುದು ಅನ್ಯಾಯವಾಗಿದೆ’ ಎಂದು ಪ್ರಜ್ಞಾ ಪ್ರಸೂನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಶಾರೂಖ್ ಖಾನ್ ಮತ್ತು ಅವರ ಮೀರ್ ಫೌಂಡೇಶನ್ ಅನ್ನು ಟ್ಯಾಗ್ ಮಾಡಿ ಪ್ರಜ್ಞಾ ಪ್ರಸೂನ್, ಆಸಿಡ್ ದಾಳಿ ಸಂತ್ರಸ್ತೆಯರನ್ನು ಈ ಜಗತ್ತು ಒಳಗೊಳ್ಳುವಂತೆ ಮಾಡಲು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಪ್ರಜ್ಞಾ ಪ್ರಸೂನ್ ಅವರಿಗೆ ಕಣ್ಣು ರೆಪ್ಪೆಗಳನ್ನು ತೆರೆಯಲು ಸಾಧ್ಯವಾಗದೆ ಇರುವುದರಿಂದ ಬ್ಯಾಂಕ್ ಖಾತೆಯನ್ನು ತೆರೆಯಲು ಕೆವೈಸಿ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಕೆವೈಸಿ ಮೂಲಕ ಸಂಪೂರ್ಣ ಬಯೋಮೆಟ್ರಿಕ್ ವಿವರಗಳನ್ನು ಸ್ಕ್ಯಾನ್ ಮಾಡುವುದು ಅಗತ್ಯವಾಗಿರುವುದರಿಂದ ಖಾತೆ ತೆರೆಯಲು ಬ್ಯಾಂಕ್ ನಿರಾಕರಿಸಿದ ಆರೋಪ ಎದುರಾಗಿದೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw