ಆಸಿಡ್ ಮಳೆಯಾಗುವ ಭೀತಿಯಲ್ಲಿ ಶ್ರೀಲಂಕಾ | ಏನಿದು ಆಸಿಡ್ ಮಳೆ? - Mahanayaka
7:07 AM Thursday 19 - September 2024

ಆಸಿಡ್ ಮಳೆಯಾಗುವ ಭೀತಿಯಲ್ಲಿ ಶ್ರೀಲಂಕಾ | ಏನಿದು ಆಸಿಡ್ ಮಳೆ?

acid rain
29/05/2021

ಕೊಲಂಬೋ: ಕಳೆದ ವಾರ ಕೊಲಂಬೊ ಸಮುದ್ರ ತೀರದಲ್ಲಿ ಸಿಂಗಾಪೂರ್‍ನ ಸರಕು ಸಾಗಾಣೆ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನೈಟ್ರೋಜನ್ ಡೈ ಆಕ್ಸೆಡ್ ಹೊರಸೂಸಿರುವುದರಿಂದ ಸಮೀಪದ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ಆಸಿಡ್ ಮಳೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೀಗಾಗಿ ಕೊಲಂಬೊ ಸುತ್ತಮುತ್ತಲಿನ ಜನ ಎಚ್ಚರಿಕೆ ವಹಿಸಬೇಕು ಎಂದು ಶ್ರೀಲಂಕಾ ಪರಿಸರ ಇಲಾಖೆ ಕರೆ ನೀಡಿದೆ.ಗುಜರಾತ್‍ನ ಹಜೀರಾದಿಂದ ಕೆಮಿಕಲ್ ಹಾಗೂ ಕಾಸ್ಮೇಟಿಕ್ ಕಚ್ಚಾ ವಸ್ತುಗಳನ್ನು ಕೊಲಂಬೊ ತರುತ್ತಿದ್ದ ಸಿಂಗಾಪೂರ್‍ನ ಎಂವಿ ಎಕ್ಸ್‍ಪ್ರೆಸ್ ಪರ್ಲ್ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು.

ಹಡಗಿನ ಟ್ಯಾಂಕಿನಲ್ಲಿ 325 ಮೆಟ್ರಿಕ್ ಟನ್ ಇಂಧನ ಇತ್ತು. ಇದರ ಜತೆಗೆ 1486 ಟ್ಯಾಂಕರ್‍ಗಳಲ್ಲಿ ನೈಟ್ರಿಕ್ ಆಸಿಡ್ ಸಾಗಿಸಲಾಗುತಿತ್ತು. ಹೀಗಾಗಿ ಬೆಂಕಿ ಕಾಣಿಸಿಕೊಂಡಾಗ ನೈಟ್ರೋಜನ್ ಆಸಿಡ್ ಹೊರಸೂಸಿದೆ.


Provided by

ಮಳೆಯಾಗುತ್ತಿದ್ದಾಗ ಅನಿಲ ಸೋರಿಕೆಯಾಗಿರುವುದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಆಸಿಡ್ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನ ಎಚ್ಚರ ವಹಿಸಬೇಕು ಎಂದು ಸಮುದ್ರ ಪರಿಸರ ರಕ್ಷಣಾ ಪ್ರಾಧಿಕಾರದ ಮುಖ್ಯಸ್ಥ ದಾರ್ಶನಿ ಲಹಂಡಾಪುರ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ