ಆಸಿಡ್ ಯಾಕೆ ಹಾಕಿದ್ದು ಎಂಬ ಪ್ರಶ್ನೆಗೆ ನಾಗೇಶನ ಉತ್ತರ ಏನು ಗೊತ್ತಾ?
ಬೆಂಗಳೂರು: ಸುಂಕದಕಟ್ಟೆಯಲ್ಲಿ ಯುವತಿಯ ಮೇಲೆ ಹಾಡಹಗಲೇ ಆ್ಯಸಿಡ್ ದಾಳಿ ನಡೆಸಿದ ಆರೋಪಿ ನಾಗೇಶನನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಇದೀಗ ಪೊಲೀಸರ ವಿಚಾರಣೆ ವೇಳೆ ಆರೋಪಿ ಸತ್ಯ ಬಾಯಿಬಿಟ್ಟಿದ್ದಾನೆ.
ಯುವತಿಗೆ ಯಾಕೆ ಆ್ಯಸಿಡ್ ಹಾಕಿದ್ದಿ ಎಂದು ಪೊಲೀಸರು ಪ್ರಶ್ನೆ ಮಾಡಿದ್ದು, ಈ ವೇಳೆ ಆತ, ನಾನು ಆ್ಯಸಿಡ್ ಹಾಕಲು ಯುವತಿಯೇ ಕಾರಣ ಎಂದು ವಾದಿಸಿದ್ದಾನೆನ್ನಲಾಗಿದೆ.
ಘಟನೆ ನಡೆದ ಹಿಂದಿನ ದಿನ ನಾನು ಬಾಯಿ ಮಾತಿಗೆ ಆ್ಯಸಿಡ್ ಹಾಕ್ತೇನೆ ಅಂದಿದ್ದೆ. ಆದರೆ ಯುವತಿ ಅದನ್ನು ಅವರ ತಂದೆಗೆ ಹೇಳಿದ್ದಾಳೆ. ಬಳಿಕ ಅವರ ತಂದೆ ನನ್ನ ಅಣ್ಣನಿಗೆ ಹೇಳಿದ್ದರು. ಇದರಿಂದಾಗಿ ನನ್ನ ಅಣ್ಣ ನನಗೆ ಸರಿಯಾಗಿ ಬೈದಿದ್ದ. ಇದರಿಂದಾಗಿ ಆ್ಯಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿ ಬಿಟ್ಟೆ ಎಂದು ನಾಗೇಶ್ ಹೇಳಿದ್ದಾನೆ ಎನ್ನಲಾಗಿದೆ.
ಯುವತಿಯ ಜೀವನವನ್ನು ನರಕ ಮಾಡಿದ ಬಳಿಕ ಆರೋಪಿ ನಾಗೇಶ್ ನೇರವಾಗಿ ತಮಿಳುನಾಡಿಗೆ ಹೋಗಿದ್ದ. ಅಲ್ಲಿ 16 ದಿನಗಳವರೆಗೆ ಸ್ವಾಮೀಜಿ ವೇಷ ಧರಿಸಿ ತಲೆಮರೆಸಿಕೊಂಡಿದ್ದ. ಆದರೆ ಕರ್ನಾಟಕ ಪೊಲೀಸರು ಇವನ ಛದ್ಮವೇಷವನ್ನು ಬಯಲು ಮಾಡಿದ್ದಾರೆ. ಕೊನೆಗೂ ಬಂಧಿಸಿ, ಇದೀಗ ಕಾನೂನಿನ ಮುಂದೆ ನಿಲ್ಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸ್ವಾಮೀಜಿ ವೇಷದಲ್ಲಿ ಸಿಕ್ಕಿ ಬಿದ್ದ ಆ್ಯಸಿಡ್ ದಾಳಿ ಆರೋಪಿ ನಾಗೇಶ್!
ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರು ನೋವು ಹೇಗೆ ಸಹಿಸುತ್ತಾರೆ?: ಭಾವುಕ ನುಡಿಗಳನ್ನಾಡಿದ ಸಿಎಂ ಬೊಮ್ಮಾಯಿ
ನಿಂಬೆ ಹಣ್ಣಿಗೆ ಕೆ.ಜಿಗೆ 300: ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಚಿನ್ ಪೈಲಟ್