ಕರಾವಳಿಗೆ ಪ್ರತ್ಯೇಕ ಉದ್ಯೋಗ ಸೃಷ್ಟಿಗೆ ಕ್ರಮ: ಪುತ್ತೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ
ಪುತ್ತೂರು: ಕರಾವಳಿಗೆ ಪ್ರತ್ಯೇಕ ಉದ್ಯೋಗ ಸೃಷ್ಟಿಗೆ ಕ್ರಮಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕೊಂಬೆಟ್ಟು ಕಾಲೇಜು ಮೈದಾನದಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕರಾವಳಿಗೆ ಪ್ರತ್ಯೇಕ ನೀತಿ ಹಾಗೂ ಟೂರಿಸಂ ಪಾಲಿಸಿ ರೂಪಿಸುತ್ತೇವೆ. ಮನಸ್ಸಿನ ಅಶಾಂತಿ ಸರಿಸಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕಿದೆ ಎಂದು ಅವರು ಹೇಳಿದರು.
ನಾನು ಮಾತಿನಲ್ಲಿ ಗೆಲ್ಲುವವನಲ್ಲ, ನಾನು ಕೆಲಸ ಮತ್ತು ಹೃದಯದಿಂದ ಜನರನ್ನು ಗೆಲ್ಲುತ್ತೇನೆ. ಇಡೀ ಸರ್ಕಾರ ಮತ್ತು ನಾನು ನಿಮ್ಮ ಜೊತೆ ಇದ್ದೇವೆ. ಮಿತ್ರ ಅಶೋಕ್ ರೈಯವರು ಇವತ್ತು ತಂದೆ, ತಾಯಿಯನ್ನು ಸ್ಮರಿಸಿ ಧರ್ಮದ ಕೆಲಸ ಮಾಡುತ್ತಾ ಇದ್ದಾರೆ. ಅವಕಾಶವನ್ನು ಪಡೆದುಕೊಳ್ಳುವುದು ಅದೃಷ್ಟ ಅಲ್ಲ, ಅವಕಾಶ ಸೃಷ್ಟಿಸುವುದು ಬುದ್ಧಿವಂತಿಕೆ ಎಂದು ಅವರು ಹೇಳಿದರು.
ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ಇವತ್ತು ಅಶೋಕ್ ರೈ ಕುಟುಂಬ ಧರ್ಮದಿಂದ ಸಮಾಜದ ಋಣ ತೀರಿಸುತ್ತಾ ಇದ್ದಾರೆ. ನನಗೆ ಬೇರೆ ಬೇರೆ ರಾಜ್ಯದ ಹಾಗೂ ನಮ್ಮ ರಾಜ್ಯದ ಚುನಾವಣೆ ಇದೆ. ಆದರೆ ಅಶೋಕ್ ರೈ ಜೊತೆಗಿನ ನಂಟಿನ ಕಾರಣದಿಂದ ಇಲ್ಲಿಗೆ ಬಂದಿದ್ದೇನೆ. ಪುತ್ತೂರಿನ ಎಲ್ಲಾ ಧರ್ಮದವರನ್ನು ಭೇಟಿಯಾಗಿರುವುದು ನನ್ನ ಭಾಗ್ಯ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: