ಪತ್ರಕರ್ತರನ್ನು ಹೆದರಿಸಿದ ಡಿಕೆಶಿ ವಿರುದ್ಧ ಕ್ರಮಕೈಗೊಳ್ಳಬೇಕು: ಶೋಭಾ ಕರಂದ್ಲಾಜೆ ಕಿಡಿ
ಬೆಂಗಳೂರು: ಪತ್ರಕರ್ತರ ಸಂಬಂಧ ಗೂಂಡಾಗಿರಿಯ ವರ್ತನೆ ತೋರಿದ ಕಾಂಗ್ರೆಸ್ ನ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮನವಿ ಮಾಡಿದ್ದಾರೆ.
ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಅವರು ಈ ಸಂಬಂಧ ಮನವಿಯೊಂದನ್ನು ಇಂದು ನೀಡಿದರು. ಡಿ.ಕೆ.ಶಿವಕುಮಾರ್ ಅವರು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಅದೇ ದಿನ ದೇಶದ ಗೃಹಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಇದ್ದರು. ಕೆಲ ಪತ್ರಕರ್ತರು ಡಿಕೆಶಿ ಸುದ್ದಿಗೋಷ್ಠಿಗೆ ಬಂದಿಲ್ಲ, ‘ಬಾರದವರ ಹೆಸರು ಬರೆದುಕೊಳ್ಳಿ. ಅವರ ಮ್ಯಾನೇಜ್ಮೆಂಟ್ ಜೊತೆ ಮಾತಾಡ್ತೀನಿ ಎಂದು ತಿಳಿಸಿದ ಶಿವಕುಮಾರ್, ಪತ್ರಕರ್ತರು ಚುನಾವಣಾ ಸಂದರ್ಭದಲ್ಲಿ ಒತ್ತಡದಲ್ಲಿ ಕೆಲಸ ಮಾಡುವುದನ್ನು ಮರೆತು ನಾನು ಪತ್ರಕರ್ತರನ್ನ ಕೊಂಡುಕೊಳ್ಳಬಲ್ಲೆ ಎಂದಿದ್ದಾರೆ. ಅವರ ಮ್ಯಾನೇಜ್ಮೆಂಟ್ ಹೇಳಿ ಕೆಲಸದಿಂದ ತೆಗೆಸುತ್ತೀನಿ ಅಂತ ಹೇಳಿದ್ದಾರೆ. ಅಲ್ಲದೆ ಗೂಂಡಾಗಿರಿ ವರ್ತನೆ ತೋರಿದ್ದಾರೆ ಎಂದು ತಿಳಿಸಲಾಗಿದೆ.
ಪತ್ರಕರ್ತರ ಜೊತೆ ನಾವಿದ್ದೇವೆ. ಪತ್ರಕರ್ತರನ್ನು ಹೆದರಿಸಿದ ಡಿಕೆಶಿ ವಿರುದ್ಧ ಕ್ರಮಕೈಗೊಳ್ಳಬೇಕು. ಕೂಡಲೇ ಡಿಕೆಶಿಗೆ ನೋಟೀಸ್ ಹೊರಡಿಸಬೇಕು ಅಂತ ಮನವಿ ಮಾಡಿದ್ದೇವೆ ಎಂದು ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಎರಡನೇ ದೂರು: ಕಾಂಗ್ರೆಸ್ ಸೋಶಿಯಲ್ ಮೀಡಿಯಾ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಸೋಶಿಯಲ್ ಮೀಡಿಯಾ ಕೆಟ್ಟದಾಗಿ ಬಳಸಿಕೊಂಡಿದ್ದಾರೆ. ತೆಲಂಗಾÀಣದ ವೀಡಿಯೋ ಬಳಸಿ, ಬಿಜೆಪಿಯ ಮೀಡಿಯಾ ವ್ಯಾನ್ ಗೆ ಕಲ್ಲು ಹೊಡೆದಿದ್ದಾರೆ ಅಂತ ಬಿಂಬಿಸಿದ್ದಾರೆ ಎಂದು ಇನ್ನೊಂದು ದೂರಿನಲ್ಲಿ ತಿಳಿಸಲಾಗಿದೆ.
ಸೋಶಿಯಲ್ ಮೀಡಿಯಾ ಟೀಮ್ ಫೋರ್ಜರಿ ಮಾಡಿದ್ದಲ್ಲದೆ, ಸಮಾಜಕ್ಕೆ ತಪ್ಪು ಸಂದೇಶ ನೀಡುವ ಕೆಲಸ ಮಾಡಿದೆ. ಕಾಂಗ್ರೆಸ್ ಸೋಶಿಯಲ್ ಮೀಡಿಯಾವನ್ನ ಬ್ಯಾನ್ ಮಾಡಬೇಕು ಎಂದು ಮನವಿ ಮಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw