Activa 6G vs TVS Jupiter: ಆಕ್ಟಿವಾ 6ಜಿ, ಟಿವಿಎಸ್ ಜುಪೀಟರ್ ನಡುವೆ ಯಾವುದು ಬೆಟರ್?
ಟಿವಿಎಸ್ ಜುಪೀಟರ್ ಮತ್ತು ಹೋಂಡಾ ಆಕ್ಟಿವಾ ಭಾರತದ ಜನಪ್ರಿಯ ಸ್ಕೂಟರ್ ಗಳು. ನೀವು ಈ ಎರಡು ಸ್ಕೂಟರ್ ಗಳಲ್ಲಿ ಒಂದನ್ನು ಖರೀದಿಸಬೇಕು ಅಂತ ಅಂದುಕೊಂಡಿದ್ದರೆ, ಇವುಗಳ ನಡುವಿನ ವ್ಯತ್ಯಾಸವೇನು?( Activa 6G vs TVS Jupiter) ಯಾವುದು ಯಾವುದಕ್ಕಿಂತ ಉತ್ತಮ ಎನ್ನುವುದನ್ನು ತಿಳಿಯುತ್ತೀರಿ. ಈ ಎರಡು ವಾಹನ ಬಳಕೆದಾರರ ಅಭಿಪ್ರಾಯಗಳಿಗೆ ತಾಳೆಹಾಕಿ ಯಾವುದು ಉತ್ತಮ ಎನ್ನುವುದನ್ನು ನೋಡೋಣ ಬನ್ನಿ…
ಆಕ್ಟಿವಾಗಿಂತ ಜುಪೀಟರ್ ಹೇಗೆ ಬೆಟರ್?
* ಜುಪೀಟರ್ ಸ್ಕೂಟರ್ ಆಕ್ಟಿವಾಕ್ಕಿಂತ ಹಗುರ.
* ಇವೆರಡೂ ಸ್ಕೂಟರ್ ಗಳಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಇದೆ. ಆದರೆ, ಸಡಿಲ ನೆಲದಲ್ಲಿ ತಿರುಗಿಸುವಾಗ ಆಕ್ಟಿವಾದ ಮುಂಭಾಗದ ಚಕ್ರ ಜಾರಿದಂತೆ ಅನಿಸಬಹುದು. ಆಕ್ಟಿವಾದ ಹಿಂಬದಿ ಹೆಚ್ಚು ತೂಕ ಇರುವುದು ಇದಕ್ಕೆ ಕಾರಣ. ಇದು ವೈಯಕ್ತಿಕ ಅಭಿಪ್ರಾಯ.
* ಜುಪೀಟರ್‌ನಲ್ಲಿ ಪೆಟ್ರೋಲ್ ರಿಫಿಲ್ ಲಿಡ್ ಒಂದು ಆಕ್ಷನ್‌ನಲ್ಲಿ ತೆರೆಯುವಂತಹದ್ದು. ಆದರೆ, ಆಕ್ಟಿವಾದಲ್ಲಿ ತ್ರಿ ವೇ ಬಟನ್ ಇದೆ.ಇದೇ ಕಾರಣಕ್ಕೆ ಆಕ್ಟಿವಾಕ್ಕೆ ಪೆಟ್ರೋಲ್ ತುಂಬಿಸಬೇಕಿದ್ದರೆ ಸವಾರ ಸ್ಕೂಟರ್‌ನಿಂದ ಇಳಿಯಬೇಕಾಗುತ್ತದೆ.
* ಆಕ್ಟಿವಾಕ್ಕೆ ಹೋಲಿಸಿದರೆ ಜುಪೀಟರ್ ನ ಸೀಟ್ ನಡಿಯಲ್ಲಿ ಹೆಚ್ಚಿನ ಸ್ಥಳಾವಕಾಶ ದೊರಕುತ್ತದೆ.
* ದರ ಹೋಲಿಕೆ ಮಾಡಿದರೆ ಆಕ್ಟಿವಾಕ್ಕಿಂತ ಒಂದೆರಡು ಸಾವಿರ ರೂಪಾಯಿ ಕಡಿಮೆ ದರದಲ್ಲಿ ಜುಪೀಟರ್ ದೊರಕಬಹುದು. ಹತ್ತಿರದ ಶೋರೂಂಗಳಿಗೆ ಹೋಗಿ ಈಗಿನ ದರ ಹೋಲಿಕೆ ಮಾಡಿ ನೋಡಿ.
* ಆಕ್ಟಿವಾದ ಬ್ರೇಕ್ ಗಿಂತ ಜುಪೀಟರ್ ಬ್ರೇಕ್ ಉತ್ತಮವಾಗಿದೆ ಎಂದು ಕೆಲವರ ಅಭಿಪ್ರಾಯ. ನೀವೊಮ್ಮೆ ಇವೆರಡು ಬೈಕ್‌ಗಳನ್ನು ರೈಡ್ ಮಾಡಿ ನೋಡಿ.
ಜುಪೀಟರ್ ಗಿಂತ ಆಕ್ಟಿವಾ ಹೇಗೆ ಬೆಟರ್?
* ದೂರ ಪ್ರಯಾಣದಲ್ಲಿ ಜುಪಿಟರ್ ಕೊಂಚ ವೈಬ್ರೆಷನ್ ನೀಡುವ ಫೀಲ್ ಆಗುತ್ತದೆ. ಆಕ್ಟೀವಾ ದೂರ ಪ್ರಯಾಣದಲ್ಲಿ ಸ್ಮೂತ್ ರೈಡಿಂಗ್ ಅನುಭವ ನೀಡುತ್ತದೆ ಎಂದು ಈಗಾಗಲೇ ಬಳಸಿದವರ ಅಭಿಪ್ರಾಯ.
* ಜುಪೀಟರ್‌ನ ಸೀಟ್ ವಿನ್ಯಾಸ ಕೊಂಚ ಓಡ್ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆಕ್ಟಿವಾಗೆ ಹೋಲಿಸಿದರೆ ಚಾಲಕ ಮತ್ತು ಹಿಂಬದಿ ಸವಾರರಿಗೆ ಜುಪೀಟರ್ ಅಷ್ಟೊಂದು ಕಂಫರ್ಟ್ ಅಲ್ಲ ಎಂದು ವಿವಿಧ ಆಟೋ ಫೋರಮ್‌ಗಳಲ್ಲಿ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
* ಆಕ್ಟಿವಾದಲ್ಲಿ ಎಂಆರ್‌ಎಫ್ ಟೈರ್ ಇದೆ. ಟಿವಿಎಸ್ ಜುಪೀಟರ್‌ನಲ್ಲಿ ಟಿವಿಎಸ್ ಟೈರ್‌ಗಳಿವೆ. ಎಂಆರ್‌ಎಫ್‌ಗೆ ಹೋಲಿಸಿದರೆ ಟಿವಿಎಸ್ ಟೈರ್‌ಗಳ ಗುಣಮಟ್ಟ ತುಸು ಕಡಿಮೆ.
* ಜುಪೀಟರ್‌ನ ಸ್ವಿಚ್‌ಗಳ ಗುಣಮಟ್ಟವೂ ಆಕ್ಟಿವಾದಷ್ಟಿಲ್ಲ.
* ಆಕ್ಟಿವಾ 6ಜಿಯಲ್ಲಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಆರಾಮವಾಗಿ ಹೋಗಬಹುದು ಆದರೆ, ಜುಪೀಟರ್ ಈ ಹಂತದಲ್ಲಿ ತುಸು ವೈಬ್ರೆಷನ್ ಆರಂಭಿಸುತ್ತದೆ.
* ಹೀಗೆ ಇವರಡು ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ತಮ್ಮದೇ ಸ್ಪೆಷಾಲಿಟಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಇವೆರಡು ಸ್ಕೂಟರ್ ಗಳನ್ನು ಟೆಸ್ಟ್ ರೈಡ್ ಮಾಡಿ ನೋಡಿ, ಟೆಸ್ಟ್ ರೈಡಿಂಗ್ ಸಮಯದಲ್ಲಿ ಮೇಲೆ ನೀಡಲಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಟೆಸ್ಟ್ ಮಾಡಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: