ಬಿಂದಿ ಇಟ್ಟಿಲ್ಲ ಎಂದು ಪತ್ರಕರ್ತೆ ಜೊತೆ ಮಾತನಾಡಲು ನಿರಾಕರಿಸಿದ ಬಲಪಂಥೀಯ ನಾಯಕ!
ಮುಂಬೈ: ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸುವ ಬದಲು, ನೀವು ಯಾಕೆ ಬಿಂದಿ(ಹಣೆ ಬೊಟ್ಟು) ಇಟ್ಟಿಲ್ಲ ಎಂದು ಬಲಪಂಥೀಯ ನಾಯಕ ಸಂಭಾಜಿ ಭಿಡೆ ಪ್ರಶ್ನಿಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಭಿಡೆಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಬಲಪಂಥೀಯ ನಾಯಕ ಸಂಭಾಜಿ ಭಿಡೆ ಭೇಟಿ ಮಾಡಿದ್ದರು. ಸಿಎಂ ಜೊತೆಗಿನ ಭೇಟಿಯ ಬಳಿಕ ಅವರಿಗೆ ಪ್ರಶ್ನೆ ಕೇಳಲು ವರದಿಗಾರ್ತಿ ಮುಂದಾಗಿದ್ದಾರೆ. ಈ ವೇಳೆ ವರದಿಗಾರ್ತಿಯ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ನೀವು ‘ಬಿಂದಿ’ಯನ್ನು ಯಾಕೆ ಇಟ್ಟುಕೊಂಡಿಲ್ಲ? ಮಹಿಳೆ ಭಾರತ ಮಾತೆಯನ್ನು ಹೋಳುತ್ತಾರೆ. ಬಿಂದಿ ಇಡದೇ ವಿಧವೆಯಂತೆ ಕಾಣಿಸಿಕೊಳ್ಳಬಾರದು ಎಂದು ಮಹಿಳೆಯರ ಸ್ವಾತಂತ್ರ್ಯದ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಾರೆ.
ಈ ಹೇಳಿಕೆ ಬಗ್ಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ವಿವರಣೆ ಕೋರಿ ಸಂಭಾಜಿ ಭಿಡೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ಬಲಪಂಥೀಯ ನಾಯಕ ಸಂಭಾಜಿ ಭಿಡೆ ಈ ಹಿಂದೆಯೂ ವಿವಾದಕ್ಕೀಡಾಗಿದ್ದರು. ಪ್ರಕೃತಿಯ ವಿರುದ್ಧವಾದ ಸಿದ್ಧಾಂತವನ್ನು ನಂಬುವ ಇವರು ‘ತನ್ನ ತೋಟದ ಮಾವಿನ ಹಣ್ಣುಗಳನ್ನು ತಿಂದರೆ ದಂಪತಿಗಳಿಗೆ ಸಂತಾನವಾಗಲಿದೆ’ ಎಂಬ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka