ನಟ ಚೇತನ್ ಅಹಿಂಸಾ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ
ಬೆಂಗಳೂರು: ನ್ಯಾಯಾಧೀಶರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದಲ್ಲಿ ನಟ, ಸಂವಿಧಾನ ಪರ ಹೋರಾಟಗಾರ ನಟ ಚೇತನ್ ಅಹಿಂಸಾ ಅವರನ್ನು ನಿನ್ನೆ ಪೊಲೀಸರು ಬಂಧಿಸಿದ್ದರು.
ನಟ ಚೇತನ್ ಅವರನ್ನು ಶೇಷಾದ್ರಿಪುರಂ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದರು. ತಡ ರಾತ್ರಿ ಚೇತನ್ ಅವರನ್ನು ವೈಯಾಲಿಕಾವನ್ ಪೊಲೀಸ್ ಠಾಣೆಯಿಂದ ಶೇಷಾದ್ರಿಪುರಂ ಪೊಲೀಸರು ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನಂತರ 8ನೇ ಎಸಿಎಂಎಂ ಕೋರ್ಟ್ ಚೇತನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಕಾರಾಗೃಹಕ್ಕೆ ಚೇತನ್ ಅವರನ್ನು ಕರೆದುಕೊಂಡು ಹೋಗುವ ವೇಳೆ ಚೇತನ್ ಅವರ ಪತ್ನಿ ಕಣ್ಣೀರು ಹಾಕಿದರು. ನಂತರ ಜೈಲಿನಲ್ಲಿದ್ದು ಓದಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ “Annihilation of cast” ಎಂಬ ಪುಸ್ತಕವನ್ನು ನೀಡಿದರು. ಈ ಸಮಯದಲ್ಲಿ ಚೇತನ್ ಅವರು ಪುಸ್ತಕವನ್ನು ಪ್ರದರ್ಶಿಸಿದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಳುವಳಿಯ ಒಡನಾಡಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಘಟನೆ ವಿವರ:
ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದ ತೀರ್ಪನ್ನು ಪ್ರಶ್ನಿಸಿ, ನಟ ಚೇತನ್ 2 ವರ್ಷಗಳ ಹಿಂದೆ ಟ್ಟೀಟ್ ಮಾಡಿದ್ದರು. ಈಗ ಹಿಜಾಬ್ ಅರ್ಜಿ ವಿಚಾರಣೆ ನಡೆಸುತ್ತಿರುವ ಅದೇ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಟ್ಟೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಟ್ಟೀಟ್ ಆರೋಪದಡಿ ನಟ ಚೇತನ್‌ರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಖಚಿತಪಡಿಸಿದ್ದಾರೆ.
ಈ ಬಗ್ಗೆ ನಟ ಚೇತನ್ ಪತ್ನಿ ಮೇಘಾ ಅವರು ಪ್ರತಿಕ್ರಿಯಿಸಿ, ಪೊಲೀಸರು ಯಾವುದೇ ನೊಟೀಸ್ ನೀಡದೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ಎದುರು ಫೇಸ್‌ಬುಕ್ ಲೈವ್‌ನಲ್ಲಿ ಆತಂಕ ವ್ಯಕ್ತಪಡಿಸಿರುವ ಮೇಘಾ, ಇಂದು ಮಧ್ಯಾಹ್ನ 3 ಗಂಟೆಯಿಂದ ನನ್ನ ಪತಿ ಚೇತನ್ ಕಾಣುತ್ತಿಲ್ಲ ಎಂದಿದ್ದರು. ಚೇತನ್ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅವರ ಗನ್‌ಮ್ಯಾನ್ ಫೋನ್‌ಗೆ ಕೂಡ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು.
ಪೊಲೀಸರಿಂದ ಉದ್ದೇಶ ಪೂರ್ವಕವಾಗಿ ಚೇತನ್‌ಗೆ ಕಿರುಕುಳ:
ಅವರಿಗೆ ನ್ಯಾಯಾಂಗದ ಸಹಾಯ ಪಡೆಯುವ ಹಕ್ಕು ಇದೆ. ಇದನ್ನು ಉಲ್ಲಂಘಿಸಿರುವ ಪೊಲೀಸರು ಉದ್ದೇಶಪೂರ್ವಕವಾಗಿ ಚೇತನ್‌ಗೆ ಕಿರುಕುಳ ನೀಡುತ್ತಿದ್ದಾರೆ. ಇದು ಸರಿಯಾದ ಮಾರ್ಗವಲ್ಲ ಎಂದು ಸಂವಿಧಾನ ಪರ ಸಂಘಟನೆಗಳು ನಿನ್ನೆ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರ ಕ್ರಮವನ್ನು ವಿರೋಧಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಖ್ಯಾತ ಹಿರಿಯ ನಟಿ ಲಿಲಿತಾ ಇನ್ನಿಲ್ಲ: ಕಂಬನಿ ಮಿಡಿದ ಚಿತ್ರರಂಗ
ನಟ ಚೇತನ್ ಪೊಲೀಸ್ ವಶಕ್ಕೆ: ಚೇತನ್ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ | ಪತ್ನಿ ಮೇಘಾ ಆತಂಕ
ಪತ್ನಿ, ಅತ್ತೆಯನ್ನು ಮಚ್ಚಿನಿಂದ ಹೊಡೆದು ಕೊಂದ ಪಾಪಿ!
ತನ್ನನ್ನು ಸಿಂಹಕ್ಕೆ ಹೋಲಿಸಿಕೊಂಡ ಸಚಿವ ಈಶ್ವರಪ್ಪ!