ನಿರ್ಮಾಪಕರ ಸಂಘದ ‘ಬ್ಯಾನ್ ಸಂಸ್ಕೃತಿ’ಗೆ ಸುಸ್ತಾದ ನಟ ಅನಿರುದ್ಧ್!: ಸಾರ್ವಜನಿಕರಿಂದ ಆಕ್ರೋಶ - Mahanayaka
6:19 PM Wednesday 11 - December 2024

ನಿರ್ಮಾಪಕರ ಸಂಘದ ‘ಬ್ಯಾನ್ ಸಂಸ್ಕೃತಿ’ಗೆ ಸುಸ್ತಾದ ನಟ ಅನಿರುದ್ಧ್!: ಸಾರ್ವಜನಿಕರಿಂದ ಆಕ್ರೋಶ

suryavamsha
09/12/2022

ಬೆಂಗಳೂರು: ನಟ ಅನಿರುದ್ಧ್ ಅವರ ವೃತ್ತಿ ಜೀವನಕ್ಕೆ ಮತ್ತೊಮ್ಮೆ ಬಹಿಷ್ಕಾರದ ಬಿಸಿ ತಟ್ಟಿದೆ. ಜೊತೆ ಜೊತೆಯಲಿ ಎಂಬ ಸೀರಿಯಲ್ ನಿಂದ ಅನಿರುದ್ಧ್ ಅವರನ್ನು ತೆಗೆದು ಹಾಕಿದ ಬಳಿಕ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ವರೆಗೆ ಬಹಿಷ್ಕರಿಸಿತ್ತು. ಇದೀಗ ಎಸ್. ನಾರಾಯಣ್ ಅವರ ಜೊತೆಗೆ ಹೊಸ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಇದು ಹೊಸ ವಿವಾದಕ್ಕೆ ಕಾರಣವಾಗಿದೆ.

ಅನಿರುದ್ಧ ಅವರನ್ನು ಬಹಿಷ್ಕರಿಸಲು ಕಿರುತೆರೆ ನಿರ್ಮಾಪಕರ ಸಂಘವು ಎಸ್.ನಾರಾಯಣ್ ಅವರನ್ನು ಆಗ್ರಹಿಸಿದೆ. ಈ ನಡೆಯನ್ನು ಪ್ರಶ್ನಿಸಿ ಅನಿರುದ್ಧ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

‘ತಾವೆಲ್ಲರೂ ಬಲ್ಲಂತೆ, ನಾನು ಅಭಿನಯಿಸುತ್ತಿದ್ದ ‘ಜೊತೆ ಜೊತೆಯಲಿ’ ಎಂಬ ಜನಪ್ರಿಯ ಧಾರಾವಾಹಿಯಿಂದ, ಇದ್ದಕ್ಕಿದ್ದಂತೆ ವಿನಾಕಾರಣ ನನ್ನನ್ನು ನಿರ್ಗಮಿಸುವಂತೆ ಮಾಡಿದ್ದರು. ಎರಡು ವರ್ಷಗಳ ಕಾಲ ನನ್ನನ್ನು ಕಿರುತೆರೆಯಿಂದ ಬ್ಯಾನ್ ಮಾಡುವುದಾಗಿ ಹೇಳಿದರು. ನಾನೀಗ ಪುನಃ ಹೊಸದೊಂದು ಧಾರಾವಾಹಿಯಲ್ಲಿ ನಟಿಸಲಿರುವ ವಿಷಯ ತಿಳಿದ ಕೂಡಲೇ, ಕಿರುತೆರೆಯ ನಿರ್ಮಾಪಕರ ಸಂಘವು ನನಗೆ ಬಹಿಷ್ಕರಿಸುತ್ತಿರುವುದಾಗಿ ಹೇಳಿ ನನ್ನ ವೃತ್ತಿ ಜೀವನಕ್ಕೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಘಟನೆಗಳ ಬೆನ್ನಲ್ಲೇ ಪ್ರಸ್ತುತ ಉದ್ಭವಿಸಿರುವ ಸಮಸ್ಯೆ ಬಗೆಹರಿಸಲು ಭಾ.ಮ.ಹರೀಶ್ ಅವರು ಶುಕ್ರವಾರ ಸಂಜೆ ನಿರ್ಮಾಪಕರ ಸಂಘದ ಸಭೆಯನ್ನು ಕರೆದಿದ್ದಾರೆ. ಎಸ್.ನಾರಾಯಣ್ ಹಾಗೂ ಅನಿರುದ್ಧ ಅವರೂ ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಎಸ್. ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ಅನಿರುದ್ಧ್ ನಟಿಸಲು ಮುಂದಾಗಿದ್ದರು. ಆದರೆ, ನಿರ್ಮಾಪಕರ ಸಂಘ ಇದಕ್ಕೆ ಅಡ್ಡಗಾಲು ಇಟ್ಟಿದೆ.

ಓರ್ವ ನಟನಿಗೆ ಒಂದು ಧಾರಾವಾಹಿಯಲ್ಲಿ ವಿವಾದಗಳು ಏರ್ಪಟ್ಟರೆ, ಅವರನ್ನು ಆ ತಂಡದಿಂದ ತೆಗೆದು ಹಾಕಬಹುದು. ಆದರೆ, ಒಬ್ಬ ನಟನನ್ನು 2 ವರ್ಷಗಳವರೆಗೆ ನಿಷೇಧಿಸುವುದು, ಆತ ಬೇರೆ ನಿರ್ದೇಶಕರೊಂದಿಗೆ, ತಂಡದೊಂದಿಗೆ ಕೆಲಸ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಅತಿರೇಕದ ವರ್ತನೆಯಲ್ಲವೇ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ. ಸಾಕಷ್ಟು ನಿರ್ಮಾಪಕರು, ನಿರ್ದೇಶಕರು ನಟ ನಟಿಯರೊಂದಿಗೆ ಜಗಳ ನಡೆಸುತ್ತಾರೆ. ಎಷ್ಟು ಜನರನ್ನು ಈವರೆಗೆ ಬ್ಯಾನ್ ಮಾಡಲಾಗಿದೆ ಅನ್ನೋ ಪ್ರಶ್ನೆಗಳು ಸದ್ಯ ಸಾರ್ವಜನಿಕರಿಂದ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ