ಕೊನೆಗೂ ಬಳ್ಳಾರಿ ಜೈಲಿನಿಂದ ನಟ ದರ್ಶನ್ ಬಿಡುಗಡೆ!
![darshan](https://www.mahanayaka.in/wp-content/uploads/2024/10/darshan-3.jpg)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಅವರು 6 ವಾರಗಳ ಕಾಲ ಸಿಕ್ಕ ಮಧ್ಯಂತರ ಜಾಮೀನು ಬೆನ್ನಲ್ಲೇ ಇಂದು ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾದರು.
ನಟ ದರ್ಶನ್ ಅವರು ಪೊಲೀಸ್ ಭದ್ರತೆಯೊಂದಿಗೆ ಜೈಲಿನಿಂದ ಹೊರ ಬಂದು ತಮ್ಮ ಕಾರು ಏರಿ ಬೆಂಗಳೂರಿನತ್ತ ಹೊರಟರು. ದರ್ಶನ್ ಬಿಡುಗಡೆಯಾಗುತ್ತಿರುವ ಸುದ್ದಿ ತಿಳಿದು ಜೈಲಿನ ಮುಂಭಾಗದಲ್ಲಿ ದರ್ಶನ್ ಅವರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು, ದರ್ಶನ್ ಪರ ಜಯಕಾರ ಹಾಕಿದರು.
5 ತಿಂಗಳ ಕಾನೂನು ಸಮರದ ಬಳಿಕ ದರ್ಶನ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರ ಬಂದ ದರ್ಶನ್ ನಡೆಯಲು ಸಾಧ್ಯವಾಗದೇ ಕುಂಟುತ್ತಾ ಸಾಗಿ ಕಾರು ಏರಿದರು. ಅಭಿಮಾನಿಗಳು ಬೊಬ್ಬೆ ಕಿರುಚಾಟಕ್ಕೆ ಕೆಲ ಕಾಲ ನಟ ದರ್ಶನ್ ವಿಚಲಿತರಾದರು.
ದರ್ಶನ್ ಗೆ ಜಾಮೀನು ದೊರೆತ ಹಿನ್ನೆಲೆ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಅವರ ನಿವಾಸವನ್ನು ಸ್ವಚ್ಛತೆ ಪಡಿಸಲಾಗಿದೆ. ಅವರು ಕಾರುಗಳನ್ನು ತೊಳೆದು ಸ್ವಚ್ಛ ಮಾಡಲಾಗಿದೆ. ಜಾಮೀನು ದೊರೆತ ಬೆನ್ನಲ್ಲೇ ದರ್ಶನ್ ಅವರು ಆಸ್ಪತ್ರೆಗೆ ದಾಖಲಾಗಲಿದ್ದಾರೆ. ತಮ್ಮ ಬೆನ್ನಿನ ಗಂಭೀರ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಇಂದು ಅಥವಾ ನಾಳೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: