ಬೆನ್ನು ನೋವಿನಿಂದ ನಟ ದರ್ಶನ್ ನರಳಾಟ ಕ್ಯಾಮರಾದಲ್ಲಿ ಸೆರೆ
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ತಮ್ಮ ಸೆಲ್ ನಿಂದ ಹೊರ ಬಂದು ಕುಟುಂಬಸ್ಥರನ್ನು ಭೇಟಿ ಮಾಡಿದ ನಂತರ ದರ್ಶನ್ ಬೆನ್ನು ನೋವಿನಿಂದಾಗಿ ನಡೆದಾಡಲು ಕೂಡ ಕಷ್ಟಪಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
80 ಮೀಟರ್ ಕೂಡ ನಡೆಯಲು ದರ್ಶನ್ ವಿಫಲರಾಗಿದ್ದಾರೆ. ಬೆನ್ನಿಗೆ ಕೈ ಒತ್ತಿಕೊಂಡು ನೋವು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಾ ತಮ್ಮ ಸೆಲ್ ಬಳಿಗೆ ನಟ ದರ್ಶನ್ ನಡೆಯುತ್ತಾ ತೆರಳುತ್ತಿದ್ದಾರೆ.
ನಡೆದಾಡುವ ವೇಳೆ ದರ್ಶನ್ ಬ್ಯಾಲೆನ್ಸ್ ಕಳೆದುಕೊಳ್ಳುತ್ತಿದ್ದಾರೆ. ನಿನ್ನೆ ಸಂಜೆ ದರ್ಶನ್ ಪರ ವಕೀಲರಾದ ರಾಮ್ ಸಿಂಗ್ ಬಳ್ಳಾರಿ ಜೈಲಿಗೆ ಬಂದಾಗ ದರ್ಶನ್ ತೀವ್ರವಾಗಿ ಕಂಗಾಲಾಗಿ ನರಳಾಡುತ್ತಿರುವ ದೃಶ್ಯ ಕಂಡು ಬಂತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: