ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್: ನೋಡಲು ಬಂದ ಅಭಿಮಾನಿಗಳಿಗೆ ಲಾಠಿ ರುಚಿ!
ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಗುರುವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಅವರು ಕೇಂದ್ರ ಕಾರಾಗೃಹಕ್ಕೆ ಸಾಮಾನ್ಯ ಕೈದಿಯಂತೆ ಪ್ರವೇಶಿಸಿದ್ದಾರೆ. ಕಪ್ಪು ಟೀ ಶರ್ಟ್ ತೊಟ್ಟು, ಎಡಗೈಗೆ ಕ್ರೇಪ್ ಬ್ಯಾಂಡ್ ಧರಿಸಿ ಬೆಡ್ ಶೀಟ್ , ಬಲಗೈಯಲ್ಲಿ ನೀರಿನ ಬಾಟಲ್ ಹಿಡಿದುಕೊಂಡು ದರ್ಶನ್ ಜೈಲಿನೊಳಗೆ ಪ್ರವೇಶಿಸಿದ್ದಾರೆ.
ಮುಂಜಾನೆ 4:30ರ ಸುಮಾರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಅವರನ್ನು ಕರೆದುಕೊಂಡು ಹೋಗಲಾಯಿತು. ಸುಮಾರು ಐದೂವರೆ ಗಂಟೆಗಳ ಪ್ರಯಾಣದ ಬಳಿಕ ಅವರನ್ನು ಬಳ್ಳಾರಿಗೆ ತಲುಪಿದ್ದಾರೆ. ಬಳ್ಳಾರಿ ಕಾರಾಗೃಹದ ಸೆಲ್ ನಂಬರ್ 15ರಲ್ಲಿ ಅವರನ್ನು ಇಡಲಾಗುತ್ತಿದೆ.
ಇನ್ನೂ ದರ್ಶನ್ ಅವರನ್ನು ನೋಡಲು ಕಾರಾಗೃಹದ ಪಕ್ಕದಲ್ಲಿ ಬೆಳಗ್ಗಿನಿಂದಲೇ ಅಭಿಮಾನಿಗಳು ಕಾದುಕುಳಿತಿದ್ದರು. ಇದೇ ವೇಳೆ ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: