ನಟ ಡಾಲಿ ಧನಂಜಯ್ ಅಜ್ಜಿ ಮಲ್ಲಮ್ಮ ನಿಧನ
24/07/2024
ನಟ ಡಾಲಿ ಧನಂಜಯ ಅವರ ಅಜ್ಜಿ ಮಲ್ಲಮ್ಮ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ನಿಧನರಾಗಿದ್ದಾರೆ.
ಮಲ್ಲಮ್ಮ ಅವರಿಗೆ 5 ಮಕ್ಕಳಿದ್ದರು. ಡಾಲಿ ಧನಂಜಯ್ ಅವರ ತಂದೆ ಅಡವಿಸ್ವಾಮಿ ಎರಡನೇಯ ಪುತ್ರ ಆಗಿದ್ದರು. ಅಜ್ಜಿ ಎಂದರೆ ನಟ ಡಾಲಿಗೆ ಬಹಳ ಪ್ರೀತಿ.
ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಮಲ್ಲಮ್ಮ ಬಂದಿದ್ದರು. ಡಾಲಿ ಧನಂಜಯ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಮೊಮ್ಮಗನಿಗೆ ಮದುವೆ ಮಾಡಿಸಬೇಕು ಎಂದು ಅಜ್ಜಿ ಹೇಳಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: