ಗೆಳೆಯನ ಜೊತೆಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ನಟಿ ಕಾರು ಅಪಘಾತದಲ್ಲಿ ದಾರುಣ ಸಾವು! - Mahanayaka

ಗೆಳೆಯನ ಜೊತೆಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ನಟಿ ಕಾರು ಅಪಘಾತದಲ್ಲಿ ದಾರುಣ ಸಾವು!

eshwari deshapande
22/09/2021

ಮುಂಬೈ: ಮರಾಠಿ ಯುವ ನಟಿ ಈಶ್ವರಿ ದೇಶಪಾಂಡೆ ಅವರು ಕಾರು ಅಪಘಾತದಲ್ಲಿ  ಮೃತಪಟ್ಟಿದ್ದು,  ಗೆಳೆಯನ ಜೊತೆಗೆ ಗೋವಾ ಪ್ರಯಾಣದಲ್ಲಿದ್ದ ಸಂದರ್ಭದಲ್ಲಿ  ಕಾರು ಗೋವಾದ ಭಾಗಾ ನದಿಗೆ ಉರುಳಿದ್ದು, ಪರಿಣಾಮವಾಗಿ ಇಬ್ಬರು ಕೂಡ ಮೃತಪಟ್ಟಿದ್ದಾರೆ.


Provided by

25 ವರ್ಷ ವಯಸ್ಸಿನ ಈಶ್ವರಿ ದೇಶಪಾಂಡೆ ತಮ್ಮ ಗೆಳೆಯ ಶುಭಂ ಡಾಂ ಜೊತೆಗೆ ಗೋವಾಕ್ಕೆ ಪ್ರವಾಸ ಹೋಗಿದ್ದರು. ಮಂಗಳವಾರ ಗೋವಾದ ಭಾಗಾ ನದಿಗೆ ಕಾರು ಉರುಳಿ ಬಿದ್ದಿದೆ. ಈ ವೇಳೆ ಕಾರು ಸೆಂಟ್ರಲ್ ಲಾಕ್ ಆಗಿದ್ದ ಕಾರಣ ಕಾರಿನಿಂದ ಹೊರ ಬರಲಾಗದೇ ಇಬ್ಬರು ಕೂಡ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಮೃತದೇಹಗಳನ್ನು ಮೃತರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಶ್ವರಿ ದೇಶಪಾಂಡೆ ಮರಾಠಿ ಸೇರಿದಂತೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದರು. ಅವರು ನಟಿಸಿದ್ದ ಎರಡು ಮರಾಠಿ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಗೋಬಿ ಮಂಚೂರಿ, ಎಗ್ ರೈಸ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!

ಜಾತಿ ಪೀಡೆಗಳನ್ನು ಮಟ್ಟ ಹಾಕಲು ನಡೆಯಲಿದೆ ಗುಪ್ತ ಸಮೀಕ್ಷೆ: ಅಸ್ಪೃಶ್ಯತೆ ಆಚರಿಸಿದರೆ ಜೈಲೂಟ ಗ್ಯಾರೆಂಟಿ

ತರಗತಿ ಕೋಣೆಯಲ್ಲಿಯೇ ಮಹಿಳೆಯೊಂದಿಗೆ ಅಸಹ್ಯವಾಗಿ ನಡೆದುಕೊಂಡ ಮುಖ್ಯ ಶಿಕ್ಷಕ | ವಿಡಿಯೋ ವೈರಲ್

ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಮುತ್ತಿಟ್ಟವ ಈಗ ಪೊಲೀಸರ ವಶದಲ್ಲಿ: ಪೊಲೀಸರೆದು ಕಣ್ಣೀರಿಟ್ಟು ಆರೋಪಿ ಹೇಳಿದ್ದೇನು?

ಉಂಡು ಮಲಗಿದರೂ ಮುಗಿಯಲಿಲ್ಲ ಗಂಡ ಹೆಂಡಿರ ಜಗಳ: ಪೊಲೀಸ್ ಠಾಣೆ ಎದುರು ಹಿಗ್ಗಾಮುಗ್ಗಾ ಥಳಿತ!

ರೇಣುಕಾಚಾರ್ಯ, ಕಾರಜೋಳ ಚಿರತೆ ಹಿಡಿಯುವುದರಲ್ಲಿ ಎಕ್ಸಪರ್ಟ್ ಗಳು | ಸದನದಲ್ಲಿ ಸ್ವಾರಸ್ಯಕರ ಚರ್ಚೆ

ಮಾಟ ಮಂತ್ರದ ಕಾರಣ ನೀಡಿ, ಶಿಕ್ಷಣ ಸಂಸ್ಥೆಗೆ ನುಗ್ಗಿ ಮೂವರು ಮಹಿಳೆಯರಿಗೆ ತಲವಾರು ಬೀಸಿದ ಯುವಕ | ಓರ್ವ ಮಹಿಳೆ ಸ್ಥಿತಿ ಗಂಭೀರ

ಇತ್ತೀಚಿನ ಸುದ್ದಿ