ಪತ್ರಕರ್ತರ ಮೇಲೆ ಹಲ್ಲೆ: ತೆಲುಗು ನಟನ ವಿರುದ್ಧ ಕೇಸ್ ದಾಖಲು
ಪತ್ರಕರ್ತರ ಕೈಯಿಂದ ಮೈಕನ್ನು ಕಿತ್ತುಕೊಂಡು ಅವರ ಮೇಲೆಯೇ ಅದನ್ನು ಬೀಸಿ ಹಲ್ಲೆ ನಡೆಸಿದ ಆರೋಪದಲ್ಲಿ ತೆಲುಗು ನಟ ಮತ್ತು ನಿರ್ಮಾಪಕ ಮೋಹನ್ ಬಾಬು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೋಹನ್ ಬಾಬು ಮತ್ತು ಅವರ ಮಗ ಮಂಜು ಮನೋಜ್ ಅವರ ನಡುವೆ ಇರುವ ವಿವಾದದ ಹಿನ್ನೆಲೆಯಲ್ಲಿ ವರದಿ ಮಾಡಲು ಪತ್ರಕರ್ತರು ಅವರ ನಿವಾಸಕ್ಕೆ ತೆರಳಿದ್ದರು.
ಈ ಹಲ್ಲೆಯನ್ನು ಖಂಡಿಸಿ ಪತ್ರಕರ್ತರು ಮೋಹನ್ ಬಾಬು ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಗ ಮಂಜು ಮನೋಜ್ ಮನೆ ಪ್ರವೇಶಿಸಲು ಪ್ರಯತ್ನಿಸಿದಾಗ ಭದ್ರತಾ ಸಿಬ್ಬಂದಿಗಳು ಅವರನ್ನು ಹೊರಗೆ ತಳ್ಳಿದರು. ಈ ಘಟನೆಯನ್ನು ವರದಿ ಮಾಡಲು ಬಂದ ಪತ್ರಕರ್ತರ ವಿರುದ್ಧ ತಿರುಗಿಬಿದ್ದ ಮೋಹನ್ ಬಾಬು ಮೈಕ್ ಕಿತ್ತುಕೊಂಡು ಪತ್ರಕರ್ತನ ಮೇಲೆ ದಾಳಿ ನಡೆಸಿದರು. ಇದರಿಂದಾಗಿ ಪತ್ರಕರ್ತನಿಗೆ ಗಾಯವಾಗಿದೆ.
ತನ್ನ ಮಗ ಮನೋಜ್ ಮತ್ತು ಆತನ ಪತ್ನಿ ತನ್ನನ್ನು ಬೆದರಿಸುತ್ತಿದ್ದಾರೆ ಮತ್ತು ಬಲಪ್ರಯೋಗದಿಂದ ಜಲ್ಪಳ್ಳಿಯಲ್ಲಿರುವ ತನ್ನ ಮನೆಯನ್ನು ವಶಪಡಿಸಿಕೊಳ್ಳುವ ತಂತ್ರ ಹೂಡಿದ್ದಾರೆ ಎಂದು ಆರೋಪಿಸಿ ಮೋಹನ್ ಬಾಬು ಪೊಲೀಸರಿಗೆ ದೂರು ನೀಡಿದ್ದರು. ಈ ಮೂಲಕ ಇವರ ನಡುವಿನ ಜಗಳ ಬಹಿರಂಗಕ್ಕೆ ಬಂದಿತ್ತು. ಆದರೆ ತಾನು ಸಂಪತ್ತಿಗಾಗಿ ಹೋರಾಡುತ್ತಿಲ್ಲ, ಸ್ವಾಭಿಮಾನಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಮನೋಜ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj