ಅಂತಾರಾಷ್ಟ್ರೀಯ ಮೇಳದಲ್ಲಿ ಪರ್ಸ್ ಎಗರಿಸಿದ ನಟಿ ಅರೆಸ್ಟ್!
ಕೋಲ್ಕತ್ತಾ: ಪಿಕ್ ಪಾಕೆಟ್ ಪ್ರಕರಣದ ಸಂಬಂಧ ಬೆಂಗಾಳಿ, ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ರೂಪಾ ದತ್ತಾ ಅವರನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಮೇಳದಲ್ಲಿ ಭಾಗವಹಿಸಿದ್ದರು. ಈ ವೇಳೆ ರೂಪಾ ದತ್ತಾ, ಪರ್ಸ್‍ವೊಂದನ್ನು ಕಸದ ಬುಟ್ಟಿಗೆ ಎಸೆಯುತ್ತಿರುವುದನ್ನು ಪೊಲೀಸರೊಬ್ಬರು ನೋಡಿದ ನಂತರ ಶನಿವಾರ ಅವರನ್ನು ಬಂಧಿಸಲಾಗಿದೆ ಎಂದು ಬಿದಾನ್ ನಗರ್ ಉತ್ತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಂಧನದ ನಂತರ ವಿಚಾರಣೆ ವೇಳೆಯಲ್ಲಿ ಆಕೆ ನೀಡಿದ್ದ ಉತ್ತರಗಳು ಸಮರ್ಪಕವಾಗಿರಲಿಲ್ಲ. ಶೋಧನೆ ವೇಳೆ ಆಕೆಯ ಬ್ಯಾಗ್ ನಿಂದ ಅನೇಕ ಪರ್ಸ್‍ಗಳು ಮತ್ತು 75 ಸಾವಿರ ರೂ. ಪತ್ತೆಯಾಗಿದೆ. ಆದರೆ ಈ ಹಣದ ಮೂಲದ ಬಗ್ಗೆ ರೂಪಾ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಗಮನ ಬೇರೆಡೆ ಸೆಳೆದು ಕಳ್ಳತನ ಆರೋಪದ ಮೇರೆಗೆ ನಟಿಯನ್ನು ಬಂಧಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಗೆದ್ದಿದ್ದೇವೆ: ಸಚಿವೆ ಶೋಭಾ ಕರಂದ್ಲಾಜೆ
ಆಟೋಗೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್: ಕೆನಡಾದಲ್ಲಿ ಭಾರತ ಮೂಲದ ಐವರು ವಿದ್ಯಾರ್ಥಿಗಳ ಸಾವು
ಪುರಾತನ ಕಾಲದ ಮಸೀದಿಗೆ ಕೇಸರಿ ಬಣ್ಣ ಬಳಿದ ದುಷ್ಕರ್ಮಿಗಳು
ಕೂದಲು ಕಸಿ ಮಾಡಿಸಿಕೊಂಡ ಮರುದಿನವೇ ಪೊಲೀಸ್ ಕಾನ್ ಸ್ಟೇಬಲ್ ದುರಂತ ಸಾವು!
ಶೇನ್ ವಾರ್ನ್ ಸಾವಿಗೂ ಮುನ್ನ ಕೊಠಡಿಯಿಂದ ಹೊರ ಹೋಗಿದ್ದ ನಾಲ್ವರು ಹುಡುಗಿಯರು | ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ