ಸಾಯಿ ಪಲ್ಲವಿ ಸತ್ಯ ಹೇಳಿದ್ದಾರೆ ಎಂದ ನಟಿ ರಮ್ಯಾ!
ಬೆಂಗಳೂರು: ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಮುಸ್ಲಿಮರ ಹತ್ಯೆ ವಿಚಾರವಾಗಿ ನಟಿ ಸಾಯಿ ಪಲ್ಲವಿ ನೀಡಿರುವ ಹೇಳಿಕೆಯನ್ನು ಮಾಜಿ ಸಂಸದೆ, ಮೋಹಕ ತಾರೆ ನಟಿ ರಮ್ಯಾ ಸಮರ್ಥಿಸಿದ್ದು, “ಸಾಯಿ ಪಲ್ಲವಿ ಸತ್ಯ ಹೇಳಿದ್ದಾರೆ” ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಬೇಕು. ಒಳ್ಳೆಯ ಮನುಷ್ಯರಾಗಿರಿ, ‘ನ್ಯಾಯದ ಪರವಾಗಿರಿ, ಇನ್ನೊಬ್ಬ ಮನುಷ್ಯನನ್ನು ನೋಯಿಸಬೇಡಿ, ನೀವು ನ್ಯಾಯಯುತವಾಗಿರುವಾಗ ಬಲ ಅಥವಾ ಎಡಪಂಥೀಯರು ಮುಖ್ಯವಲ್ಲ ಎಂದು ಸಾಯಿಪಲ್ಲವಿ ಹೇಳಿದರು. ಯಾವುದೇ ವಿವೇಕಿ ಮತ್ತು ಸಭ್ಯ ಮನುಷ್ಯನು ತಿಳಿದುಕೊಳ್ಳಬೇಕಾದ ವಿಷಯವಿದು ಎಂದು ರಮ್ಯಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಾಯಿ ಪಲ್ಲವಿ, ಕಾಶ್ಮೀರಿ ಪಂಡಿತರ ಹತ್ಯೆಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂದು ಕಾಶ್ಮೀರಿ ಫೈಲ್ಸ್ ಚಲನಚಿತ್ರದಲ್ಲಿ ತೋರಿಸಲಾಗಿದೆ. ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ನೀವು ಪರಿಗಣಿಸುತ್ತಿದ್ದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ ‘ಜೈ ಶ್ರೀ ರಾಮ್’ ಎಂದು ಹೇಳಲು ಒತ್ತಾಯಿಸಿದ ಘಟನೆ ನಡೆದಿದೆ, ಹಾಗಾದರೆ ಎರಡೂ ಘಟನೆಗಳ ನಡುವೆ ಏನು ವ್ಯತ್ಯಾಸ ಇದೆ?’ ಎಂದು ಪ್ರಶ್ನಿಸಿದ್ದರು.
ಸಾಯಿ ಪಲ್ಲವಿ ಹೇಳಿಕೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಬಲಪಂಥೀಯ ವಿಚಾರ ಧಾರೆಯ ಮಾಧ್ಯಮಗಳು ಕೂಡ ಸಾಯಿ ಪಲ್ಲವಿ ಹೇಳಿಕೆ ವಿವಾದಾತ್ಮಕವಾದದ್ದು ಎಂದು ಹೇಳಿವೆ. ಈ ನಡುವೆ ನಟಿ ರಮ್ಯಾ ಸಾಯಿ ಪಲ್ಲವಿ ಅವರನ್ನು ಬೆಂಬಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೋಣೆಯ ಕರ್ಟನ್ ಸರಿಪಡಿಸುತ್ತಿದ್ದ ವೇಳೆ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು
104 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನ ರಕ್ಷಣೆ
ಕರ್ತವ್ಯ ನಿರತ ಪೊಲೀಸ್ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು!
ತುಮಕೂರು: ಡಿಎಸ್ ಎಸ್ ಮುಖಂಡನನ್ನು ಕೊಚ್ಚಿ ಬರ್ಬರ ಹತ್ಯೆ
ಯೋಗ ದಿನ: ಮೈಸೂರು ಮಹಾರಾಜರಿಗೆ ಆಹ್ವಾನ ಯಾಕಿಲ್ಲ? | ಪ್ರತಾಪ್ ಸಿಂಹ ಹೇಳಿದ್ದೇನು?