ಸರ್ಜರಿಗೆ ಅಮೆರಿಕಕ್ಕೆ ತೆರಳುವ ಮುನ್ನ ನಟ ಶಿವರಾಜ್ ಕುಮಾರ್ ಭಾವುಕ
ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯ ಹಿನ್ನೆಲೆ ಸರ್ಜರಿಗಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇಂದು ರಾತ್ರಿಯ ಫ್ಲೈಟ್ ನಲ್ಲಿ ಅಭಿಮಾನಿಗಳ ಮೆಚ್ಚಿನ ಶಿವಣ್ಣ ಅಮೆರಿಕದತ್ತ ಪ್ರಯಾಣ ಬೆಳೆಸಿದ್ದಾರೆ.
ಅಮೆರಿಕಕ್ಕೆ ತೆರಳುವ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೊಸ ವರ್ಷಕ್ಕೆ ಕರ್ನಾಟಕದಲ್ಲಿರಲು ಆಗ್ತಿಲ್ಲ ಎನ್ನುವ ಬೇಸರ ಇದೆ. ನಾನು ಕೂಡ ಮಿಸ್ ಮಾಡಿಕೊಳ್ತೇನೆ ಎಂದು ಭಾವುಕರಾದರು.
ಹಲವಾರು ಬಾರಿ ಆರೋಗ್ಯ ತಪಾಸಣೆ ನಡೆಸಿದೆ. ರಿಪೋರ್ಟ್ ಚೆನ್ನಾಗಿದೆ. ಸರ್ಜರಿ ಅಂತ ಬಂದಾಗ ಒಂದಷ್ಟು ಆತಂಕ ಸಹಜ ಹೀಗಾಗಿ ಫ್ಯಾಮಿಲಿ, ಫ್ರೆಂಡ್ಸ್ ಕೂಡ ಬಂದು ಧೈರ್ಯ ಹೇಳುತ್ತಿದ್ದಾರೆ ಎಂದು ಶಿವರಾಜ್ ಕುಮಾರ್ ಹೇಳಿದರು.
ಡಿಸೆಂಬರ್ 24ಕ್ಕೆ ನನಗೆ ಸರ್ಜರಿ ಆಗುತ್ತದೆ. ತುಂಬಾ ದಿನಗಳು ಆಗಿರೋದ್ರಿಂದ ನನಗೂ ಸ್ವಲ್ಪ ಆತಂಕವಿದೆ. ನನಗೆ ಮುರುಗೇಶ್ ಎಂಬ ಡಾಕ್ಟರ್ ಚಿಕಿತ್ಸೆ ನೀಡ್ತಾರೆ. ಆರಾಮಾಗಿ ಬನ್ನಿ ಸರ್ ಭಯ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.
ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸಿಟಿಟ್ಯೂಟ್ ನಲ್ಲಿ ಆಪರೇಷನ್ ನಡೆಯಲಿದೆ. ಸರ್ಜರಿಗೆ ಹೋಗ್ತೇನೆ ಅಂತ ನನ್ನನ್ನು ನೋಡಲು ಅಭಿಮಾನಿಗಳು, ಕನ್ನಡ ಚಿತ್ರರಂಗದ ಗಣ್ಯರು, ನಟರು ಕೂಡ ಬಂದಿದ್ದರು. ಇಂತಹ ಸಂದರ್ಭದಲ್ಲಿ ಧೈರ್ಯ ಹೇಳಿದ್ದಾರೆ, ಅವರ ಪ್ರೀತಿಗೆ ಸದಾ ಚಿರರುಣಿಯಾಗಿರುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: