ನಿರ್ದೇಶಕ, ನಟ ಶ್ರೀನಿವಾಸನ್ ಅವರ ಆರೋಗ್ಯ ಸ್ಥಿತಿ ಗಂಭೀರ
ಕೊಚ್ಚಿ: ಮಲಯಾಳಂ ನಟ ಮತ್ತು ನಿರ್ದೇಶಕ ಶ್ರೀನಿವಾಸನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶ್ರೀನಿವಾಸನ್ ಅವರು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಅಂಗಮಾಲಿ ಅಪೋಲೋ ಅಡ್ಲಕ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
ಶ್ರೀನಿವಾಸನ್ ಅವರ ಆರೋಗ್ಯ ಸುಧಾರಿಸುತ್ತಿದ್ದು, ಔಷಧಿಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಿವಾಸನ್ ಅವರನ್ನು ಮಾರ್ಚ್ 30ರಂದು ಎದೆನೋವಿನಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗುರುವಾರ, (ಮಾರ್ಚ್ 31) ರಂದು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಮೂರು ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದರು.
ವೆಂಟಿಲೇಟರ್‌ನಿಂದ ತೆಗೆದ ನಂತರ, ಶ್ರೀನಿವಾಸನ್‌ಗೆ ಸೋಂಕು ಕಾಣಿಸಿಕೊಂಡಿದ್ದು, ಹೀಗಾಗಿ ಮತ್ತೆ ಅವರಿಗೆ ವೆಂಟಿಲೇಟರ್ ನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉತ್ತರ ಪತ್ರಿಕೆಯಲ್ಲಿ “ಪುಷ್ಪಾ… ಪುಸ್ಪರಾಜ್” ಎಂದು ಬರೆದಿಟ್ಟ ವಿದ್ಯಾರ್ಥಿನಿ: ಶಿಕ್ಷಕರು ಕಂಗಾಲು
ಮೀನು ಹಿಡಿಯಲು ತೆರಳಿದ್ದ ಯುವಕ ಬಲೆಯಲ್ಲಿ ಸಿಲುಕಿ ಸಾವು
ಎರಡು ತಲೆ ಹಾವು ಮಾರಾಟ ಯತ್ನ ಆರೋಪಿಗಳ ಬಂಧನ
ನಟ ಮೋಹನ್ ಲಾಲ್ ವಿರುದ್ಧ ದಂತ ಪ್ರಕರಣ: ಸರ್ಕಾರದ ನಿರ್ಧಾರದ ವಿರುದ್ಧದ ಅರ್ಜಿಗಳನ್ನು ತಿರಸ್ಕರಿಸಿದ ಕೋರ್ಟ್
ದಲಿತ ಯುವಕನ ಹತ್ಯೆ: ಬೇಜವಾಬ್ದಾರಿ ಹೇಳಿಕೆ ನೀಡಿದ ಅರಗ ಜ್ಞಾನೇಂದ್ರ: 2 ಲಕ್ಷ ನೆರವು ನೀಡಿದ ಜಮೀರ್