ಗ್ರಾಮಾಂತರ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಟ ವಿಜಯ್ ಅಭಿಮಾನಿಗಳ ಸಂಘ - Mahanayaka
6:42 PM Wednesday 11 - December 2024

ಗ್ರಾಮಾಂತರ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಟ ವಿಜಯ್ ಅಭಿಮಾನಿಗಳ ಸಂಘ

actor vijay
14/10/2021

ಚೆನ್ನೈ: ಇಳೆಯ ದಳಪತಿ ವಿಜಯ್ ಸಿನಿಮಾಗಳು ಅಂದ್ರೆ, ತಮಿಳುನಾಡು ಮಾತ್ರವಲ್ಲ ಇಡೀ ಭಾರತದಲ್ಲಿಯೇ ಉತ್ತಮ ಬೇಡಿಕೆ ಇದೆ. ಇದೇ ಸಂದರ್ಭದಲ್ಲಿ ಅವರ ತಂದೆ ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷ  ಸಜ್ಜುಗೊಳಿಸಲು ಯತ್ನಿಸಿದ್ದರೆ. ಇದನ್ನು ವಿರೋಧಿಸಿ ವಿಜಯ್ ಕೋರ್ಟ್ ಗೆ ಕೂಡ ಹೋಗಿದ್ದರು. ಆದರೆ ತಮ್ಮ ಅಭಿಮಾನಿಗಳಿಗೆ ಮಾತ್ರ ಈ ಬಾರಿ ಅವರು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿದ್ದರು.

ತಮಿಳು ಚಿತ್ರರಂಗದಲ್ಲಿ ರಜನೀಕಾಂತ್ ನಂತರ ಎರಡನೇ ಸ್ಥಾನದಲ್ಲಿರುವ ವಿಜಯ್ ಅವರ ಅಭಿಮಾನಿಗಳ ಸಂಘ – ಅಖಿಲ ಭಾರತ ತಲಪತಿ ವಿಜಯ್ ಮಕ್ಕಳ ಇಯ್ಯಕಂ-ಒಂಬತ್ತು ಜಿಲ್ಲೆಗಳ ಗ್ರಾಮೀಣ ಸಂಸ್ಥೆಗಳಿಂದ ಸ್ಪರ್ಧಿಸಲು ವಿಜಯ್ ಅವಕಾಶ ನೀಡಿದ್ದರು, ಅಂತೆಯೇ 169 ಸ್ಥಾನಗಳಲ್ಲಿ ವಿಜಯ್ ಅಭಿಮಾನಿಗಳು ಸ್ಪರ್ಧಿಸಿದ್ದು, ಈ ಪೈಕಿ 115 ಸ್ಥಾನಗಳಲ್ಲಿ ವಿಜಯ್ ಅಭಿಮಾನಿಗಳು ಗೆಲುವು ದಾಖಲಿಸುವ ಮೂಲಕ ತಮಿಳುನಾಡಿನಲ್ಲಿ ವಿಜಯ್ ಗೆ ರಾಜಕೀಯದಲ್ಲಿ ಭವಿಷ್ಯವಿದೆ ಎನ್ನುವ ಮೊದಲ ಸೂಚನೆಯನ್ನು ನೀಡಿದೆ.

115 ವಿಜೇತರಲ್ಲಿ 45 ಮಹಿಳೆಯರು, ರೈತರು, ಲ್ಯಾಬ್ ತಂತ್ರಜ್ಞರು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ವ್ಯಾಪಾರಿಗಳು ಸೇರಿದ್ದಾರೆ ಎಂದು ವಿಜಯ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ತಿಳಿಸಿದ್ದಾರೆ.

ವಿಜಯ್ ಕಣಕ್ಕೆ ಧುಮುಕುವ ಮೊದಲು ಸರಿಯಾದ ಸಂಶೋಧನೆ ನಡೆಸಿದ್ದಾರೆ. ಅವರು ತಮ್ಮ ಅಭಿಮಾನಿಗಳಿಗೆ ತಮ್ಮ ಹೆಸರು ಮತ್ತು ಧ್ವಜವನ್ನು ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಕೆಲವು ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿದಿದ್ದರು. ಅವರು ರಾಜಕೀಯದಲ್ಲಿ ಧುಮುಕುವ ಸಾಧ್ಯತೆಯಿದೆ ಎನ್ನುವ ಮಾತುಗಳು ಈ ಅದ್ದೂರಿ ಗೆಲುವಿನ ಬೆನ್ನಲ್ಲೇ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಕೋಟಿಗೊಬ್ಬ-3 ಬಿಡುಗಡೆಗೆ ಯಾರಿಂದ ತೊಂದರೆ ಆಯ್ತು ಅಂತ ಗೊತ್ತಿದೆ | ವಿಡಿಯೋ ಶೇರ್ ಮಾಡಿದ ಕಿಚ್ಚ ಸುದೀಪ್

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅರೆಸ್ಟ್

ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ: ಶಿಕ್ಷಕನ ಕೃತ್ಯದ ವಿಡಿಯೋ ವೈರಲ್ ಮಾಡಿದ ವಿದ್ಯಾರ್ಥಿಗಳು

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ದೇವಸ್ಥಾನದ ಮೇಲೆ ಅಪರಿಚಿತರಿಂದ ದಾಳಿ

ಪುತ್ತೂರು: ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾದಿಂದ 65ನೇ ಧಮ್ಮ‌ದೀಕ್ಷಾ ಕಾರ್ಯಕ್ರಮ

ಅಮಾನವೀಯ ಘಟನೆ: ಹೊಲದಲ್ಲಿ ಗನ್ ಪಾಯಿಂಟ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ

ನೈತಿಕ ಪೋಲಿಸ್ ಗಿರಿ: ಸಿಎಂ ಹೇಳಿಕೆ ದುಷ್ಕ್ರತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಿದೆ | ಸಿಪಿಐಎಂ ಆಕ್ರೋಶ

ನೈತಿಕ ಪೋಲಿಸ್ ಗಿರಿ: ಸಿಎಂ ಹೇಳಿಕೆ ದುಷ್ಕ್ರತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಿದೆ | ಸಿಪಿಐಎಂ ಆಕ್ರೋಶ

ಇತ್ತೀಚಿನ ಸುದ್ದಿ