ಸೈಕಲ್ ನಲ್ಲಿ ಮತಗಟ್ಟೆಗೆ ಬಂದು ಪೆಟ್ರೋಲ್ ಬೆಲೆ ಏರಿಕೆ ನೆನಪಿಸಿದ ನಟ ವಿಜಯ್! - Mahanayaka

ಸೈಕಲ್ ನಲ್ಲಿ ಮತಗಟ್ಟೆಗೆ ಬಂದು ಪೆಟ್ರೋಲ್ ಬೆಲೆ ಏರಿಕೆ ನೆನಪಿಸಿದ ನಟ ವಿಜಯ್!

actor vijay today rode
06/04/2021

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಲು ಇಳೆಯದಳಪತಿ ವಿಜಯ್ ಸೈಕಲ್ ನಲ್ಲಿ ಆಗಮಿಸಿದ್ದು, ಆ ಬಳಿಕ ಈ ದೃಶ್ಯ ವೈರಲ್ ಆಗಿದ್ದು, ಪೆಟ್ರೋಲ್ ಬೆಲೆ ಏರಿಕೆಯನ್ನು ನೆನಪಿಸಲು ವಿಜಯ್ ಸೈಕಲ್ ನಲ್ಲಿ ಬಂದಿದ್ದಾರೆ ಎಂಬ ಊಹಾಪೋಹಾಗಳು ಸೃಷ್ಟಿಯಾಗಿವೆ.

ನಟ ವಿಜಯ ಕಿರಿದಾದ ರಸ್ತೆಯೊಂದರಲ್ಲಿ ತನ್ನ ಸೈಕಲ್ ನಲ್ಲಿ ಪ್ರಯಾಣಿಸುತ್ತಿರುವುದು ಮತ್ತು ಅವರ ಹಿಂದೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಟ ವಿಜಯ್ ಅವರು ಪೆಟ್ರೋಲ್ ಬೆಲೆ ಏರಿಕೆಯನ್ನು ನೆನಪಿಸಲು ಸೈಕಲ್ ನಲ್ಲಿ ಬಂದಿದ್ದಾರೆ ಎಂದು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಪೋಟೋ ವೈರಲ್ ಆಗಿದೆ.

ಇನ್ನೂ ಘಟನೆ ಸಂಬಂಧ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ನಟ ವಿಜಯ್ ಅವರ ಆಪ್ತ ರಿಯಾಜ್ ಕೆ. ಅಹ್ಮದ್ ,  ಮತದಾನ ಕೇಂದ್ರ ವಿಜಯ್ ಅವರ ನಿವಾಸದ ಬಳಿಯೇ ಇದ್ದುದರಿಂದಾಗಿ ಅವರು ಕಾರಿನ ಬದಲು ಸೈಕಲ್ ಮೂಲಕ ಹೋಗಿದ್ದಾರೆ. ಕಾರುನ್ನು ತೆಗೆದುಕೊಂಡು ಹೋದರೆ, ರಸ್ತೆಯಲ್ಲಿ ಹೆಚ್ಚು ದಟ್ಟಣೆ ಕೂಡ ಆಗುತ್ತದೆ.  ಹಾಗಾಗಿ ಅವರು ಸೈಕಲ್ ನಲ್ಲಿ ಹೋಗಿದ್ದಾರೆಯೇ ಹೊರತು ಬೇರೆ ಯಾವುದೇ ಉದ್ದೇಶ ಇದರಲ್ಲಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಜೊತೆಗೆ ಸಂಬಂಧ ಹೊಂದಿರುವ ಆಡಳಿತ ರೂಢ ಪಕ್ಷವೂ ಆಗಿರುವ ತಮಿಳುನಾಡಿನ AIADMKಗೆ ಪೆಟ್ರೋಲ್ ಬೆಲೆ ಏರಿಕೆ ಸಂಬಂಧ ನಟ ವಿಜಯ್ ಸಂದೇಶ ನೀಡಿದ್ದಾರೆ ಎಂಬ ಚರ್ಚೆಗಳು ಇದೀಗ ತಮಿಳುನಾಡಿನಲ್ಲಿ ಆರಂಭವಾಗಿದೆ.

ಇತ್ತೀಚಿನ ಸುದ್ದಿ