ಮೃತರ ಮನೆಗೆ ಭೇಟಿ ನೀಡಲಿದ್ದಾರೆ ನಟ ಯಶ್:  ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ

yash
08/01/2024

ಬೆಂಗಳೂರು: ನಟ ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಕಟೌಟ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೂವರು ಮೃತಪಟ್ಟು, ಇನ್ನಿತರ ಮೂವರು ಗಂಭೀರವಾಗಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಮೃತಪಟ್ಟವರ ಕುಟುಂಬಕ್ಕೆ  ಸರ್ಕಾರ  ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ಪರಿಹಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ವರದಿಗಳ ಪ್ರಕಾರ ಇಂದು ಸಂಜೆ ನಾಲ್ಕು ಗಂಟೆಗೆ ಅಭಿಮಾನಿಗಳ ಮನೆಗೆ ನಟ ಯಶ್ ಭೇಟಿ ನೀಡಲಿದ್ದಾರೆ ಎನ್ನಲಾಗ್ತಿದೆ.  ನಟ ಯಶ್ ಅವರು ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ ಬಳಿಕ ಸೂರಣಗಿಗೆ ಹೋಗಲಿದ್ದಾರೆ ಎಂದು ಹೇಳಲಾಗಿದೆ.

ಅಭಿಮಾನಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಸೂರಣಗಿ ಗ್ರಾಮಕ್ಕೆ ನಟ ಯಶ್ ಬರಬೇಕು, ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು ಎಂದು ಎಂದು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದರು.

ಯಶ್ ಅವರ ಹುಟ್ಟು ಹಬ್ಬದ ದಿನದಂದೇ ಮೂವರು ಅಭಿಮಾನಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಯಶ್ ಅಭಿಮಾನಿಗಳು ಇದೀಗ ಮೂವರು ಅಭಿಮಾನಿಗಳ ದುರ್ಮಣಕ್ಕೆ ಮರುಗಿದ್ದಾರೆ. ಜೊತೆಗೆ ಕಟೌಟ್ ಗಳನ್ನು ಹಾಕುವ ವೇಳೆ ಸರಿಯಾಗಿ ಗಮನಿಸಿ ಅಳವಡಿಸಿ, ಎತ್ತರದ ಕಟೌಟ್ ಗಳನ್ನು ಅಳವಡಿಸುವಾಗ ಎಚ್ಚರಿಕೆ ವಹಿಸಬೇಕು. ವಿದ್ಯುತ್ ತಂತಿಗಳಿರುವ ಜಾಗದಲ್ಲಿ ಕಟೌಟ್ ಹಾಕಲು ಮುಂದಾಗದಿರುವುದು ಉತ್ತಮ ಅನ್ನೋ ಜಾಗೃತಿಯ ಸಂದೇಶ ಕೂಡ ಮೂಡಿಸಬೇಕಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ:

 

Click: ರಾಕಿಂಗ್ ಸ್ಟಾರ್ ಯಶ್  ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ಶಾಕ್: ಮೂವರು ಸಾವು, ಮೂವರಿಗೆ ಗಂಭೀರ ಗಾಯ

Click:  ಕುಟುಂಬಕ್ಕೆ ಆಧಾರವಾಗಿದ್ದ ಮೂವರು ಯುವಕರ ದುರಂತ ಸಾವು: ದಿಕ್ಕೇ ತೋಚದೇ ಕಣ್ಣೀರಿಡುತ್ತಿರುವ ಕುಟುಂಬಸ್ಥರು

Click: ಎಂಥಾ ಮಕ್ಕಳಿಗೆ ಜನ್ಮ ಕೊಟ್ಟೆ ತಾಯಿ: 7 ಮಕ್ಕಳಿದ್ದರೂ ತಾಯಿ ಸತ್ತಾಗ ಒಬ್ಬರೂ ಬರಲಿಲ್ಲ!

ಇತ್ತೀಚಿನ ಸುದ್ದಿ

Exit mobile version